ಕರ್ನಾಟಕ ವಿಧಾನಸಭಾ ಚುನಾವಣೆ : ಅಖಾಡದ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ….

ಬೆಂಗಳೂರು :  ಭಾರೀ ಕುತೂಹಲ ಮೂಡಿಸಿರುವ ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಿದೆ.

ಶನಿವಾರ ಒಟ್ಟು 5.06 ಕೋಟಿ ಮತದಾರರು ಹೊಸ ಸರ್ಕಾರ ರಚನೆ ಮಾಡುವ ಹಕ್ಕು ಚಲಾಯಿಸಲಿದ್ದಾರೆ.  ಇಂದು ಬೆಳಗ್ಗೆ 7ಗಂಟೆಯಿಂದ ಮತದಾನ ಪ್ರಾರಂಭವಾಗಿದ್ದು, ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರವೊಂದನ್ನು ಬಿಟ್ಟು ಇನ್ನುಳಿದ 22 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ.

ಈಗಾಗಲೆ ಅನೇಕ ರಾಜಕೀಯ ನಾಯಕರು, ಸ್ವಾಮೀಜಿಗಳು ಮತ ಚಲಾಯಿಸಿದ್ದಾರೆ. ಕೆಲವೆಡೆ ವಿವಿ ಪ್ಯಾಟ್‌ಗಳಲ್ಲಿ ದೋಷ ಕಂಡು ಬಂದ ಕಾರಣ ಇನ್ನೂ ಮತದಾನ ಪ್ರಕ್ರಿಯೆ ಪ್ರಾರಂಭವಾಗಿಲ್ಲ.

ಬೆಂಗಳೂರು ಸೇರಿದಂತೆ ಕೆಲ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ.

ಇನ್ನು ಬೆಂಗಳೂರಿನ 28 ಕ್ಷೇತ್ರಗಳ ಪೈಕಿ 26 ಕ್ಷೇತ್ರಗಳಲ್ಲಿ  10.500 ಪೊಲೀಸ್‌ ಅಧಿಕಾರಿಗಳು. ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬೆಂಗಳೂರಿನಲ್ಲಿ 7,477 ಮತಗಟ್ಟೆಗಳನ್ನು ತೆರೆಯಲಾಗಿದ್ದು, 1,469 ಮತಗಟ್ಟೆಗಳನ್ನು ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಎಂದು ಪರಿಗಣಿಸಲಾಗಿದೆ.

ರಾಜ್ಯದ ಒಟ್ಟು ಮತದಾರರ ಸಂಖ್ಯೆ 5 ಕೋಟಿ 06 ಲಕ್ಷದ 90 ಸಾವಿರದ 538 ಆಗಿದ್ದು, ಇದರಲ್ಲಿ 2 ಕೋಟಿ 56 ಲಕ್ಷದ 75 ಸಾವಿರದ 579  ಮಂದಿ ಪುರುಷ ಮತದಾರರಿದ್ದಾರೆ. 2 ಕೊಟಿ 50 ಲಕ್ಷದ 09 ಸಾವಿರದ 904 ಮಂದಿ ಮಹಿಳಾ ಮತದಾರರಿದ್ದು, ಮೊದಲ ಬಾಿಗೆ 15 ಲಕ್ಷದ 42 ಸಾವಿರ ಮಂದಿ  ಮೊದಲ ಬಾರಿಗೆ ಓಟ್ ಮಾಡುತ್ತಿದ್ದಾರೆ. ರಾಜ್ಯದಲ್ಲಿ  56 ಸಾವಿರದ 696 ಒಟ್ಟು ಮತಗಟ್ಟೆಗಳಿದ್ದು,  3 ಲಕ್ಷದ 56 ಸಾವಿರದ 552 ಮಂದಿ ಚುನಾವಣಾ ಸಿಬ್ಬಂದಿ ಕರ್ತವ್ಯ ನಿರತರಾಗಿದ್ದಾರೆ.  76 ಸಾವಿರದ 110 ವಿವಿಪ್ಯಾಟ್‍ಗಳಿದ್ದು,  82 ಸಾವಿರದ 157  ಭದ್ರತಾ ಸಿಬ್ಬಂದಿ ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದಾರೆ.

Leave a Reply

Your email address will not be published.