SHOCKING : ಮತಯಂತ್ರದಲ್ಲಿ ಯಾವುದೇ ಬಟನ್‌ ಒತ್ತಿದ್ರೂ ಮತ ಮಾತ್ರ ಬಿಜೆಪಿಗೆ ?

ಬೆಂಗಳೂರು : ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಈಗ ಕರ್ನಾಟಕದಲ್ಲಿ ಗೆಲ್ಲಲು ಬಿಜೆಪಿ ಬಾರೀ ಪೈಪೋಟಿ ನಡೆಸುತ್ತಿದೆ. ಅಲ್ಲದೆ ಇತರೆ ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಯಾವುದೇ ಬಟನ್‌ ಒತ್ತಿದರೂ ಬಿಜೆಪಿಗೇ ಹೋಗುತ್ತದೆ ಎಂದು ವಾದಿಸಲಾಗಿತ್ತು.

ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲು ಕೂಡ ಏರಿತ್ತು. ಆದರೆ ಯಾವುದೇ ಸಾಕ್ಷಿಯಿಲ್ಲದೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಅದಕ್ಕೆ ಪುಷ್ಠಿ ನೀಡುವಂತೆ ಒಂದು ಅಹಿತಕರ ಘಟನೆಯೊಂದು ರಾಜಧಾನಿಯಲ್ಲಿ ನಡೆದಿದೆ.

ಬೆಂಗಳೂರು ನಗರದ ಆರ್‌ಎಂವಿ 2ನೇ ಹಂತದ 2ನೇ ಬೂತ್‌ನಲ್ಲಿ ಇವಿಎಂ ಯಂತ್ರದ ಯಾವುದೇ ಬಟನ್ ಒತ್ತಿದರೂ ಮತ ಬಿಜೆಪಿಗೆ ಹೋಗುತ್ತಿದೆ ಎಂದು ಕಾಂಗ್ರೆಸ್ ನ ಹಿರಿಯ ಮುಖಂಡ ಟ್ವೀಟ್ ಮಾಡಿದ್ದರು. ಆದರೆ ನಂತರ ದೋಷವನ್ನು ಸರಿಪಡಿಸಲಾಗಿದೆ.

ಬೆಳಗ್ಗೆ 8 ಗಂಟೆಗೆ ಟ್ವೀಟ್ ಮಾಡಿರುವ ಕಾಂಗ್ರೆಸ್‌ನ ಹಿರಿಯ ಮುಖಂಡ ಬ್ರಿಜೇಶ್ ಕಾಳಪ್ಪ ಅವರು, ‘ಆರ್‌ಎಂವಿ 2ನೇ ಹಂತದ 2ನೇ ಬೂತ್‌ನಲ್ಲಿ ಇವಿಎಂ ಸಮಸ್ಯೆ ಇದ್ದು ಯಾವ ಬಟನ್‌ಗೆ ಮತ ಹಾಕಿದರೂ ಬಿಜೆಪಿಗೆ ಮತ ಹೋಗಿದೆಯೆಂದು ವಿವಿಪ್ಯಾಟ್‌ನಲ್ಲಿ ತೋರಿಸುತ್ತಿದೆ ಎಂದು ಆರೋಪಿಸಿದ್ದರು.

9 ಗಂಟೆ ಸುಮಾರಿಗೆ ಮತ್ತೆ ಟ್ವೀಟ್ ಮಾಡಿರುವ ಬ್ರಿಜೇಶ್ ಕಾಳಪ್ಪ ಅವರು, ಇನ್ನೂ ಸಮಸ್ಯೆ ಸರಿಹೋಗಿಲ್ಲ, ಮತದಾರರೆಲ್ಲರೂ ಕೋಪಗೊಂಡು ವಾಪಸ್ಸಾಗುತ್ತಿದ್ದಾರೆ. ನನ್ನ ಮತ ಸಹ ಇದೇ ಬೂತ್‌ನಲ್ಲಿ ಚಲಾಯಿಸಬೇಕಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ  ಒಂದು ಗಂಟೆಯ ಬಳಿಕ ದೋಷವನ್ನು ಸರಿಪಡಿಸಲಾಗಿದ್ದು ಮತ್ತೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದು ಕೇವಲ ದೋಷ ಪೂರಿತ ಯಂತ್ರ. ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶ ಇಲ್ಲ ಎಂದು ಚುನಾವಣಾ ಅದಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com