ಹೆಬ್ಬಾಳದಲ್ಲಿ ಮತದಾರರಿಗೆ ಆವಾಜ್‌ ಹಾಕಿದ ಬಿಜೆಪಿ ಕಾರ್ಯಕರ್ತ ಅರೆಸ್ಟ್ !

ಬೆಂಗಳೂರು : ಹೆಬ್ಬಾಳ ಕ್ಷೇತ್ರದ ಗೋಪಾಲ್‌ ರಾಮನಾರಾಯಣ್ ಸರ್ಕಾರ ಪ್ರಾಥಮಿಕ ಶಾಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಮತದಾರರಿಗೆ ಆವಾಜ್‌ ಹಾಕಿದ ಘಟನೆ ನಡೆದಿದೆ.

ಶಾಸಕರು ಮತದಾನ ಮಾಡಲು ಬರುತ್ತಾರೆ. ನಂತರ ವೋಟ್‌ ಮಾಡಿ. ಅದಕ್ಕೂ ಮುನ್ನ ಯಾರೂ ವೋಟ್‌ ಹಾಕಿದರೆ ಸರಿ ಇರುವುದಿಲ್ಲ ಎಂದು ಆವಾಜ್‌ ಹಾಕಿದ್ದಾರೆ. ಅಷ್ಟೇ ಅಲ್ಲದೆ ಚುನಾವಣಾಧಿಕಾರಿಗಳಿಗೂ ಆವಾಜ್‌ ಹಾಕಿ 10 ನಿಮಿಷ ಮತದಾನಕ್ಕೆ ಅಡ್ಡಿ ಮಾಡಿರುವುದಾಗಿ ತಿಳಿದುಬಂದಿದೆ.

ಬಿಜೆಪಿ ಕಾರ್ಯಕರ್ತರ ವರ್ತನೆಗೆ ಮತದಾರರು ವಿರೋಧ ವ್ಯಕ್ತಪಡಿಸಿದ್ದು, ಪೊಲೀಸರು ಬಿಜೆಪಿ ಕಾರ್ಯಕರ್ತನನ್ನು ಬಂಧಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com