ಹಂಪಿನಗರದಲ್ಲಿ ಬಿಜೆಪಿ ಕಾರ್ಪೋರೇಟರ್‌ ಆನಂದ್‌ ಮೇಲೆ ಹಲ್ಲೆ : ಪರಿಸ್ಥಿತಿ ಉದ್ವಿಗ್ನ

ಬೆಂಗಳೂರು : ವಿಜಯನಗರದ ಹಂಪಿನಗರದಲ್ಲಿ ಮತದಾನ ನಡೆಯುವ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾರಾಮಾರಿ ನಡೆದಿದೆ.

ಬಿಜೆಪಿ ಕಾರ್ಪೋರೇಟರ್‌ ಆನಂದ್‌ ಅವರ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರು ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿದೆ.

ಹಂಪಿನಗರದ 143ನೇ ನಂಬರ್‌ ಬೂತ್‌ ಬಳಿ ಘಟನೆ ನಡೆದಿದೆ. ವೋಟಿಂಗ್ ಬೂತ್‌ ಸಮೀಪವೇ ಕಾಂಗ್ರೆಸ್‌ ಕಾರ್ಯಕರ್ತರು ಮತದಾರರಿಗೆ ಕಾಂಗ್ರೆಸ್‌ಗೆ ವೋಟ್ ಹಾಕುವಂತೆ  ಹೇಳಿ ಕಳಿಸುತ್ತಿದ್ದರು. ಆದರೆ ಮತಕೇಂದ್ರದ 100 ಮೀ ಒಳಗೆ ಯಾರನ್ನೂ ಬಿಡುವಂತಿಲ್ಲ ಎಂಬ ನಿಯಮವಿದ್ದು ನಿಯಮ ಮೀರಿದ್ದಕ್ಕಾಗಿ ಬಿಜೆಪಿ ಕಾರ್ಯಕರ್ತರು ಇದನ್ನು ಪ್ರಶ್ನಿಸಿದ್ದಾರೆ. ಅಲ್ಲದೆ ಇದೇ ವೇಳೆ ಆನಂದ್‌ ಮತದಾನ ಪ್ರಕ್ರಿಯೆ ವೀಕ್ಷಸಲು ಬೂತ್‌ ಬಳಿ ತೆರಳಿದ್ದು ಈ ವೇಳೆ ಆನಂದ್‌ ಅವರ ಮೇಲೆ ಹಲ್ಲೆ ನಡೆಸಲಾಗಿದೆ.

ಕೂಡಲೆ ಸ್ಥಳದಲ್ಲಿದ್ದ ಪೊಲೀಸರು ಹಾಗೂ ಅರೆಸೇನಾಪಡೆ ಗುಂಪನ್ನು ಚದುರಿಸಿದ್ದು,  ಕಾಂಗ್ರೆಸ್‌ ಹಾಗೂ  ಬಿಜೆಪಿ  ಕಾರ್ಯಕರ್ತರನ್ನು ಬೇರೆಡೆಗೆ ಕಳಿಸಲಾಗಿದೆ.

Leave a Reply

Your email address will not be published.