ಈ ಬಾರಿ ನಾವೇ ಸರ್ಕಾರ ರಚಿಸುತ್ತೇವೆ : ಮತದಾನದ ಬಳಿಕ HDD ಹೇಳಿಕೆ

ಬೆಂಗಳೂರು : ಇಂದು ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಅವರು ಹಾಸನದ ಹೊಳೇನರಸೀಪುರದ ಮತಗಟ್ಟೆ ಸಂಖ್ಯೆ 224ರಲ್ಲಿ ಮತ ಚಲಾಯಿಸಿದ್ದು, ನಾವು ಸರ್ಕಾರ ರಚಿಸುವ ನಿರೀಕ್ಷೆಯಲ್ಲಿದ್ದೇವೆ. ನಾನು ಉತ್ತಮವಾಗಿ ಪ್ರಚಾರ ಮಾಡಿದ್ದೇವೆ. ಮತದಾರ ನಮ್ಮ ಬಗ್ಗೆ ಒಲವು ತೋರಿದ್ದು, ಈ ಬಾರಿ ಸರ್ಕಾರ ರಚಿಸುವುದು ಖಾತ್ರಿ ಎಂದಿದ್ದಾರೆ. ಮತಗಟ್ಟೆ ಸಂಖ್ಯೆ 224 ರಲ್ಲಿ ಪತ್ನಿ ಚೆನ್ನಮ್ಮ, ಪುತ್ರ ಎಚ್ ಡಿ. ರೇವಣ್ಣ ಮತ್ತು ಕುಟುಂಬದ ಇತರ ಸದಸ್ಯರೊಂದಿಗೆ ತೆರಳಿ ದೇವೇಗೌಡರು ಮತಚಲಾಯಿಸಿದರು.
ದೇವೇಗೌಡರು ಮತ ಚಲಾಯಿಸುವ ಮತಗಟ್ಟೆಯಲ್ಲಿ ವಿವಿ ಪ್ಯಾಟ್‌ ಕೈ ಕೊಟ್ಟಿದ್ದು, ಕೆಲಕಾಲ ಅಲ್ಲೇ ಕಾದು ನಿಂತು ಬಳಿಕ  ಮತದಾನ ಮಾಡಿದ್ದಾರೆ.

Leave a Reply

Your email address will not be published.