ಕೈ ಕೊಟ್ಟ ಮತಯಂತ್ರ : ಹೆಬ್ಬಾಳದ ಲೊಟ್ಟೆಗೊಲ್ಲಹಳ್ಳಿಯಲ್ಲಿ ಮರು ಮತದಾನಕ್ಕೆ ಅವಕಾಶ

ಬೆಂಗಳೂರು : ಹೆಬ್ಬಾಳದ ಲೊಟ್ಟೆಗೊಲ್ಲಹಳ್ಳಿಯಲ್ಲಿ ಮರುಮತದಾನ ನಡೆಸಲಾಗುವುದು ಎಂದು ಚುನಾವಣಾ ಆಯುಕ್ತ ಸಂಜೀವ್‌ ಕುಮಾರ್ ಹೇಳಿದ್ದಾರೆ. ಹೆಬ್ಬಾಳದ ಲೊಟ್ಟೆಗೊಲ್ಲಹಳ್ಳಿಯ 158 ಮತಗಟ್ಟೆಯ 2ನೇ ಬೂತ್‌ನಲ್ಲಿ ಮತಯಂತ್ರ ಕೆಟ್ಟಿದ್ದ ಕಾರಣ ಬೆಳಗ್ಗಿನಿಂದ ಇಲ್ಲಿಯವರೆಗೂ ಒಂದೂ ಮತದಾನ ಆಗಿಲ್ಲ.
ಮತಯಂತ್ರದಲ್ಲಿ ದೋಷವಿದ್ದ ಕಾರಣ ಮತಯಂತ್ರವನ್ನು ರಿಪೇರಿಗೆಂದು ತೆಗೆದುಕೊಂಡು ಹೋದ ಸಿಬ್ಬಂದಿ ಮಧ್ಯಾಹ್ನವಾದರೂ ಯಂತ್ರ ರಿಪೇರಿ ಆಗದ ಕಾರಣ ಒಬ್ಬ ಮತದಾರನೂ ಮತ ಹಾಕಲಿಲ್ಲ, ಕೊನೆಗೆ ಚುನಾವಣಾ ಆಯುಕ್ತರು ಮರು ಮತದಾನಕ್ಕೆ ಅವಕಾಶ ಮಾಡಿಕೊಡುವುದಾಗಿ ಘೋಷಿಸಿದ್ದಾರೆ.

ಮರುಮತದಾನದ ದಿನಾಂಕವನ್ನು ಶೀಘ್ರವೇ ಘೋಷಿಸಲಾಗುವುದು ಎಂದು ಚುನಾವಣಾ ಆಯುಕ್ತ ಸಂಜೀವ್‌ ಕುಮಾರ್ ಹೇಳಿದ್ದಾರೆ. ೊ

One thought on “ಕೈ ಕೊಟ್ಟ ಮತಯಂತ್ರ : ಹೆಬ್ಬಾಳದ ಲೊಟ್ಟೆಗೊಲ್ಲಹಳ್ಳಿಯಲ್ಲಿ ಮರು ಮತದಾನಕ್ಕೆ ಅವಕಾಶ

Leave a Reply

Your email address will not be published.

Social Media Auto Publish Powered By : XYZScripts.com