ಜಾಹೀರಾತಿನಲ್ಲಿ BSYಗಿಲ್ಲ ಜಾಗ : ಇಷ್ಟು ಬೇಗ ಬಿಜೆಪಿಗೆ ಬೇಡವಾದರೇ ಯಡಿಯೂರಪ್ಪ!

ಬೆಂಗಳೂರು : ಕರ್ನಾಟಕ ರಾಜ್ಯ ಚುನಾವಣೆ ರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸುದ್ದಿ ಮಾಡುತ್ತಿದೆ. ಈ ಬಾರಿ ಕರ್ನಾಟಕ ಚುನಾವಣೆ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದ್ದರೆ ಮತ್ತೊಂದೆಡೆ ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಪಕ್ಷದ ನಾಯಕರು ಕರ್ನಾಟಕವನ್ನು ಬಿಜೆಪಿಗೆ ಬಿಟ್ಟುಕೊಡದಿರಲು ಟೊಂಕ ಕಟ್ಟಿ ನಿಂತಿದ್ದಾರೆ.

ಈ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಪ್ರಧಾನಿ ಮೋದಿ, ಅಮಿತ್ ಶಾ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಬಂದು ಚುನಾವಣಾ ಪ್ರಚಾರ ಮಾಡಿದ್ದರು. ಆದರೆ ಈ ರಾಷ್ಟ್ರೀಯ ನಾಯಕರ ಮುಂದೆ ಕರ್ನಾಟಕದ ಬಿಜೆಪಿ  ಮುಖ್ಯಮಂತ್ರಿ ಅಭ್ಯರ್ಥಿ, ಮುಂದೆ ರಾಜ್ಯದ ಅಭಿವೃದ್ಧಿಗೆ ಕಾರಣರಾಗಬೇಕಿದ್ದ ಯಡಿಯೂರಪ್ಪ ಕಳೆಗುಂದಿದ್ದಂತೂ ಸತ್ಯ. ರಾಷ್ಟ್ರೀಯ ನಾಯಕರ ಮುಂದೆ ಯಡಿಯೂರಪ್ಪ ತಲೆ ಬಗ್ಗಿಸಿ ನಿಂತಿದ್ದೇ ಹೆಚ್ಚು. ಈ ಕಾರಣಕ್ಕಾಗಿ ಸ್ವತಃ ಬಿಜೆಪಿಗರೇ ಮೋದಿ, ಶಾ ಅವರ ಮುಂದೆ ಯಡಿಯೂರಪ್ಪ ಏನೂ ಅಲ್ಲ ಎಂದಿದ್ದುಂಟು.

ಅಲ್ಲದೆ ಕರ್ನಾಟಕ ಚುನಾವಣೆಗಾಗಿ ಬಿಜೆಪಿ,  ಎಲ್ಲಾ ಪತ್ರಿಕೆಗಳಲ್ಲೂ ಜಾಹೀರಾತು ನೀಡಿದೆ. ಈ ಜಾಹೀರಾತಿನಲ್ಲಿ ಕೇವಲ ಮೋದಿ ಹಾಗೂ ಅಮಿತ್ ಶಾ ಅವರ ಫೋಟೋವನ್ನು ಹಾಕಲಾಗಿದ್ದು, ಕರ್ನಾಟಕದ ಮುಖ್ಯಮಂತ್ರಿ ಅಭ್ಯರ್ಥಿಯ ಫೋಟೋ ನಾಪತ್ತೆಯಾಗಿದೆ. ಈ ಕಾರಣದಿಂದಾಗಿ ಕರ್ನಾಟಕದಲ್ಲಿ ಆಡಳಿತ ನಡೆಸಬೇಕಾಗಿರುವುದು ಯಡಿಯೂರಪ್ಪನವರೋ ಅಥವಾ ಮೋದಿ , ಅಮಿತ್ ಶಾ ಅವರೋ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಸೋಶಿಯಲ್‌ ಮೀಡಿಯಾಗಳಲ್ಲಿ ಟ್ರೋಲ್‌ ಮಾಡಲಾಗುತ್ತಿದೆ.

3 thoughts on “ಜಾಹೀರಾತಿನಲ್ಲಿ BSYಗಿಲ್ಲ ಜಾಗ : ಇಷ್ಟು ಬೇಗ ಬಿಜೆಪಿಗೆ ಬೇಡವಾದರೇ ಯಡಿಯೂರಪ್ಪ!

Leave a Reply

Your email address will not be published.

Social Media Auto Publish Powered By : XYZScripts.com