ಟೀಮ್ ಇಂಡಿಯಾದ ಈ ಪ್ಲೇಯರ್ ಅಫ್ರಿದಿ ಮೆಚ್ಚಿನ ಕ್ರಿಕೆಟರ್ ಅಂತೆ..!

ಪಾಕಿಸ್ತಾನದ ಆಲ್ರೌಂಡರ್ ಶಾಹಿದ್ ಅಫ್ರಿದಿ ಕ್ರಿಕೆಟ್ ಜಗತ್ತಿನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ನಿಂದಲೇ ಹೆಸರಾದವರು. ಸಿಕ್ಸರ್, ಬೌಂಡರಿ ಬಾರಿಸುವ ಮೂಲಕ ಎದುರಾಳಿ ತಂಡದವರ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದರು.

ಇತ್ತೀಚೆಗೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಅಭಿಮಾನಿಯೊಬ್ಬನ ಪ್ರಶ್ನೆಗಳಿಗೆ ಶಾಹಿದ್ ಉತ್ತರಿಸಿದ್ದಾರೆ. ಕೂಲೆಸ್ಟ್ ಕ್ಯಾಪ್ಟನ್ ಯಾರೆಂಬ ಪ್ರಶ್ನೆಗೆ ಉತ್ತರಿಸಿದ ಅಫ್ರಿದಿ ಮಹೇಂದ್ರ ಸಿಂಗ್ ಧೋನಿ ಎಂದು ಹೇಳಿದ್ದಾರೆ. ಟೀಮ್ ಇಂಡಿಯಾದಲ್ಲಿ ನಿಮ್ಮ ಮೆಚ್ಚಿನ ಕ್ರಿಕೆಟರ್ ಯಾರೆಂದು ಕೇಳಿದ್ದಕ್ಕೆ ಅಫ್ರಿದಿ, ‘ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ನನ್ನ ಫೇವರೆಟ್ ಆಟಗಾರ ‘ ಎಂದು ಹೇಳಿದ್ದಾರೆ.

ಅಭಿಮಾನಿಯ ಪ್ರಶ್ನೆಗಳಿಗೆ ಶಾಹಿದ್ ಅಫ್ರಿದಿ ಉತ್ತರಿಸಿದ್ದು ಹೀಗೆ..

  • ಪಾಕಿಸ್ತಾನಕ್ಕೆ ಗೆಲ್ಲಲು 5 ಓವರುಗಳಲ್ಲಿ 75 ರನ್ ಬೇಕಿದ್ದಾಗ, ನಿಮ್ಮ ಜೊತೆ ಬ್ಯಾಟಿಂಗ್ ಪಾರ್ಟ್ನರ್ ಆಗಿ ಯಾರನ್ನು ಬಯಸುತ್ತೀರಾ..? – ಅಬ್ದುರ್ ರಜಾಕ್
  • ಕ್ರಿಕೆಟರ್ ಆಗಿಲ್ಲದಿದ್ದರೆ ಏನಾಗಿರುತ್ತಿದ್ದಿರಿ..? – ಸೈನ್ಯದಲ್ಲಿರುತ್ತಿದ್ದೆ.
  • ಜಾಗತಿಕ ಕ್ರಿಕೆಟ್ ನಲ್ಲಿ ಕೂಲೆಸ್ಟ್ ಕ್ಯಾಪ್ಟನ್ ಯಾರು..? – ಮಹೇಂದ್ರ ಸಿಂಗ್ ಧೋನಿ
  • ಟೀಮ್ ಇಂಡಿಯಾದಲ್ಲಿ ಮೆಚ್ಚಿನ ಕ್ರಿಕೆಟರ್ ಯಾರು..? – ವಿರಾಟ್ ಕೊಹ್ಲಿ

Leave a Reply

Your email address will not be published.