ಮಧ್ಯಪ್ರದೇಶ : ದೇವಸ್ಥಾನದಲ್ಲೇ ತನ್ನ ನಾಲಿಗೆ ಕತ್ತರಿಸಿ ದೇವಿಗೆ ಅರ್ಪಿಸಿದ ಭಕ್ತೆ……..!!

ಭೋಪಾಲ್‌ : ಮಹಿಳೆಯೊಬ್ಬರು ಅತಿರೇಕದ ಭಕ್ತಿಯಿಂದಾಗಿ ದೇವಸ್ಥಾನದಲ್ಲಿಯೇ ದೇವಿಯ ಮುಂದೆ ನಾಲಿಗೆ ಕತ್ತರಿಸಿ ದೇವಿಗೆ ಅರ್ಪಿಸಿದ ಘಟನೆ ಮದ್ಯಪ್ರದೇಶದ ಮೊರೆನಾ ಜಿಲ್ಲೆಯ ತರ್ಸಮಾ ಎಂಬ ಗ್ರಾಮದಲ್ಲಿ ನಡೆದಿದೆ.

45 ವರ್ಷದ ಮಹಿಳೆ ದಿನನಿತ್ಯ ಬಿಜಾಸನ ಮಾತಾ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸುತ್ತಿದ್ದರು. ಅದೇ ರೀತಿ ಎಂದಿನಂತೆ ದೇವಸ್ಥಾನಕ್ಕೆ ತೆರಳಿದ ಮಹಿಳೆ ಏಕಾಏಕಿ ದೇವಿಯ ಮುಂದೆ ತನ್ನ ನಾಲಿಗೆಯನ್ನು ಕತ್ತರಿಸಿಕೊಂಡಿದ್ದು, ಕೂಡಲೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.

ಘಟನೆ ನಡೆದ ಕೂಡಲೆ ಅಲ್ಲಿದ್ದ ಜನರು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು. ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನೆ ಕುರಿತು ಮಹಿಳೆಯ ಪತಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು , ಮದುವೆಯಾದಾಗಿನಿಂದ ಪ್ರತಿನಿತ್ಯ ಎರಡು ಬಾರಿ ದೇವಾಲಯಕ್ಕೆ ಹೋಗಿ ಬರುತ್ತಿದ್ದಳು.  ನಮಗೆ ಮೂವರು ಗಂಡು ಮಕ್ಕಳಿದ್ದು, ನನ್ನ ಪತ್ನಿ ದೇವರನ್ನು ಬಹಳ ನಂಬುತ್ತಾಳೆ. ಆದರೆ ಆಕೆ ಯಾವ ಕಾರಣದಿಂದ ನಾಲಿಗೆ ಕತ್ತರಿಸಿಕೊಂಡಳು ಎಂದು ನನಗೆ ತಿಳಿದಿಲ್ಲ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com