ಪತ್ರಿಕೋದ್ಯಮದ ವ್ಯಭಿಚಾರಿ ಕೆ.ಪಿ.ನಂಜುಂಡಿ ಹಾಗೂ ಟಿವಿ1 ಶೆಟರ್ ಎಳೆದ ಕಥೆ….

ಅದು ನಾನು ಟಿವಿ1 ನಲ್ಲಿ ಕೆಲಸಕ್ಕೆಂದು ಸಂದರ್ಶನಕ್ಕೆ ಹೋಗಿದ್ದ ದಿನ..ಆಫೀಸಿನ ಕಾರ್ ಪಾರ್ಕಿಂಗ್‍ನಲ್ಲಿ ಒಂದು ಸಣ್ಣ ಟೆಂಟ್ ಮಾಡಿಕೊಂಡಿದ್ದ ಅಜ್ಜಿ ಅಂದು ಅಳುತ್ತಿದ್ದಳು, ನಂಜುಂಡಿಯ ಮೇಲೆ ಮಣ್ಣು ಎಸೆದು ನೀನು ಸರ್ವನಾಶವಾಗಿ ಹೋಗ್ತೀಯ ಅಂತ ಶಾಪ ಹಾಕ್ತಾ ಇದ್ಳು..ನಾನು ಏನ್ ವಿಶ್ಯ ಅಂತ ಕೇಳಿದಾಗ ಟಿವಿ1 ಕಚೇರಿ ಕೆಲಸ ಆರಂಭವಾದಾಗ ಸೆಂಟ್ರಿಂಗ್, ಟೈಲ್ಸ್ ಕೆಲಸ, ವೈರಿಂಗ್ ಎಲೆಕ್ಟ್ರಿಕ್ ಕೆಲಸಕ್ಕೆಂದು ಅನೇಕರು ಉತ್ತರ ಕರ್ನಾಟದಿಂದ ಬಂದು ಹಗಲು ರಾತ್ರಿ ದುಡಿದಿದ್ದರು. ಪರಿಣಾಮ ಅತ್ಯಂತ ಕಡಿಮೆ ಸಮಯಕ್ಕೆ ಟಿವಿ1 ಕಚೇರಿ ತಲೆ ಎತ್ತಿ ನಿಂತಿತ್ತು.. ಆದ್ರೆ ಆ ಅಜ್ಜಿಯ ಕೆಲಸಕ್ಕೆ ನ್ಯಾಯಯುತವಾಗಿ ಸಲ್ಲಬೇಕಿದ್ದ ಹಣವನ್ನು ನಂಜುಂಡಿ ಕೊಟ್ಟಿರಲಿಲ್ಲ. ಆತ ಹಣ ಕೊಡ್ತಾನೆ ಅಂತ ಆಸೆಯಿಂದ ಕಾರ್‌ಶೆಡ್‍ನಲ್ಲಿ ಟೆಂಟ್ ಹಾಕಿ ಸುಮಾರು ಎರಡು ತಿಂಗಳು ಕಾದಿದ್ದ ಅಜ್ಜಿಗೆ ಕೊನೆಗೂ ಹಣ ಸಿಕ್ಕಿರಲಿಲ್ಲ. ಆತನ ಮಹಾ ಮೋಸಕ್ಕೆ ಆಕೆ ಕೊನಗೆ ಶಾಪ ಹಾಕಿ ಹೋಗಿದ್ದಳು..
ಮನೆಯ ಕಷ್ಟಕ್ಕೆ ಡೇ ಅಂಡ್ ನೈಟ್‌ ಕೆಲಸ ಮಾಡಬೇಕು ಎಂದು ತೀರ್ಮಾನ ಮಾಡಿದ್ದ ಎಲೆಕ್ಟ್ರಿಶಿಯನ್ ಒಬ್ಬ ಅಮಾಯಕನಂತೆ ಇಲ್ಲಿ ಕೆಲಸ ಕೇಳಿ ಬಂದಿದ್ದ.. ಹಣ ಗಳಿಸುವ ಆಸೆಯಿಂದ ಬೆಳಗ್ಗೆ ಎಲ್ಲೋ ಬೇರೆಡೆ ಕೆಲಸ ಮಾಡಿ ರಾತ್ರಿ ಹೊತ್ತಿನಲ್ಲಿ ಟಿವಿ1ಗೆ ವೈರಿಂಗ್ ಹಾಗೂ ಎಲೆಕ್ಟ್ರಿಕಲ್ ಕೆಲಸ ಮಾಡ್ತಾ ಇದ್ದ. ಸುಮಾರು ನಾಲ್ಕೈದು ತಿಂಗಳು ಹೀಗೆ ನಿದ್ದೆ ಬಿಟ್ಟು ಕೆಲಸ ಮಾಡಿದ ಆತನಿಗೆ ಬರೋಬ್ಬರಿ ಒಂದೂವರೆ ಲಕ್ಷ ಹಣ ಸಂದಾಯವಾಗಬೇಕಿತ್ತು. ಹಣಕ್ಕೆ ಕಾದು ಕಾದು ಸುಸ್ತಾದ ಆತ ಕೊನೆಗೆ ಶಾಪವಿಟ್ಟು ಬರಿಗೈಲಿ ಮನೆಗೆ ತೆರಳಿದ್ದ..
ಇನ್ನೂ ಕ್ಯಾಂಟೀನ್ ಮಾಲೀಕನ ಕಥೆ ಬೇರೆಯೇ ಇದೆ. tv1 ಆಫೀಸಿನ ಮೊದಲನೇ ಮಹಡಿಯನ್ನು ವಿವಿಧ ಸಮಾಜದ ಸ್ವಾಮೀಜಿಗಳ ಮುಖಂಡರ ಸಮಾವೇಶ ಹಾಗೂ ಮೀಟಿಂಗ್‍ಗೆಂದು ಬಿಡಲಾಗಿದೆ. ಇಲ್ಲಿ ಪ್ರತಿ ಭಾನುವಾರ ನೂರಾರು ಜನ ಜಮೆ ಆಗ್ತಾರೆ. ಅವರಿಗೆ ಕ್ಯಾಂಟೀನ್ ನಲ್ಲಿ ಮಧ್ಯಾಹ್ನ ಊಟ ಕಾಫಿ ಟೀ ಇತ್ಯಾದಿ ವ್ಯವಸ್ಥೆ ಇರುತ್ತೆ. ಆದ್ರೆ ಲಕ್ಷ ರೂಪಾಯಿ ಮುಂಗಡ ಕೊಟ್ಟು ಕ್ಯಾಂಟೀನ್ ಆರಂಭಿಸಿದ ವ್ಯಕ್ತಿ ಇವರ ಸಮಾವೇಶದಲ್ಲಿ ಜನ ತಿಂದ ಊಟಕ್ಕೆ ಹಣ ಕೇಳಿದ್ರೆ ಮತ್ತದೇ ದರ್ಪ..ಕ್ಯಾಂಟೀನ್ ಖಾಲಿ ಮಾಡು ಎಂಬ ಆವಾಜ್..ಮಂಗಳೂರಿಂದ ಕುಟುಂಬ ಸಮೇತ ಬಂದಿದ್ದ ಕ್ಯಾಂಟೀನ್ ಮಾಸ್ಟರ್ ಶಾಪದ ಹೊರತು ಇಂತಹ ಬಲಿತವರಿಗೆ ಬೇರೇನೂ ಮಾಡಲು ಸಾಧ್ಯ.. ಆದ್ರೆ ಇಂತಹಾ ನಿಸ್ಸಹಾಯಕರ ಶಾಪ ಕೊನೆಗೂ ತಟ್ಟಿದೆ.. ಕೆ.ಪಿ.ನಂಜುಂಡಿಯ ಕನಸಿನ ಕೂಸು, ಪತ್ರಿಕೋದ್ಯಮದ ಪಾಲಿನ ಬೇಡದ ಕೂಸು ಕೊನೆಗೂ ಗರ್ಭಪಾತವಾಗಿದೆ. ಅಕ್ಷರಶಃ ಟಿವಿ1 ಬಾಗಿಲು ಎಳೆದುಕೊಳ್ಳಲು ತುದಿಗಾಲಲ್ಲಿ ನಿಂತಿದೆ..

ಪತ್ರಕರ್ತರನ್ನು ಪುಟಗೋಸಿ ಎಂದವನ ಕಥೆ..
ಕೆ.ಪಿ.ನಂಜುಂಡಿ ತಾನು ಬಡತನದಿಂದ ಬೆಳೆದು ಬಂದವ ಎಂದು ಹೇಳಿಕೊಳ್ಳುತ್ತಾನೆ. ಆದ್ರೆ ಆತನ ಮನಸ್ಸಿನಲ್ಲಿ ಈಗಲೂ ಶತಮಾನದ ಹಿಂದಿನ ಜಮೀನ್ದಾರಿ ಪಾಳೆಗಾರಿಕೆ ಮನಸ್ಥಿತಿ ಹಾಗೆ ಇದೆ. ತನ್ನ ಬಳಿ ಸಂಬಳ ಪಡೆಯುವವರು ತಮ್ಮ ಗುಲಾಮರು ಎಂಬ ಭಾವನೆ ಆತನದು. ಇದೇ ಕಾರಣಕ್ಕೆ ಆಗಿಂದಾಗ್ಗೆ ಪತ್ರಕರ್ತರೆಂದರೆ ಜುಜುಬಿ. ನನಗೆ ಅವರು ಪುಟಗೋಸಿಗಳು ಎಂದು ಹೀನಾಮಾನ ಮಾತನಾಡುತ್ತಿದ್ದ. ಈತನ ಮಾತಿಗೆ ಬೇಸತ್ತು ಅದೆಷ್ಟೋ ಪ್ರಾಮಾಣಿಕ ಪತ್ರಕರ್ತರು ಟಿವಿ ಲಾಂಚ್ ಆಗುವ ಮುಂಚೆಯೇ ಕೆಲಸ ಬಿಟ್ಟಿದ್ರು. ಇನ್ನೂ ಅನೇಕರು ಚುನಾವಣೆಯ ನಂತರ ಕೆಲಸ ಬಿಡುವ ತೀರ್ಮಾನ ಮಾಡಿದ್ರು. ಎಲ್ಲಾ ರಿಪೋರ್ಟರ್‌ಗಳ ಹಿಂದೆಯೂ ಸ್ಟೈಗಳನ್ನು ಬಿಟ್ಟು ವಿಷಯವನ್ನು ಸಂಗ್ರಹಿಸುತ್ತಿದ್ದ. ಈತ ಹಲವರಿಗೆ ಸಂಬಳ ಕೊಡದೆ ಸತಾಯಿಸಲು, ಕೆಲಸ ಬಿಟ್ಟು ತೆಗೆಯಲು ನಿಶ್ಚಯಿಸಿದ್ದ.
ಹಾಗೆ ನೋಡಿದ್ರೆ ಪ್ರತಿ ತಿಂಗಳ 5ನೇ ತಾರೀಕು ಸಂಬಳ ಕೊಡುವ ಭರವಸೆ ನೀಡಿಯೇ ಎಲ್ಲರನ್ನೂ ಕೆಲಸಕ್ಕೆ ತೆಗೆದುಕೊಳ್ಳಲಾಗಿತ್ತು. ಆದ್ರೆ ಒಂದು ದಿನವೂ 5ನೇ ತಾರೀಕು ಸಂಬಳ ಕೊಟ್ಟಿದ್ದನ್ನ ನಾ ಕಾಣೆ. ಒಂದು ದಿನ ಫೇಸ್‍ಬುಕ್ ಲೈವ್‍ನಲ್ಲಿ ಚಾನೆಲ್ ಮುಖ್ಯಸ್ಥ ಶಿವಪ್ರಸಾದ್ ಸಹ ಬೇರೆ ಚಾನಲ್‍ಗೆ ಟಾಂಗ್ ಕೊಡೋ ಬರದಲ್ಲಿ ನಾವು ನಮ್ಮ ಎಂಪ್ಲಾಯ್‍ಗಳಿಗೆ 5ನೇ ತಾರೀಕೇ ಸಂಬಳ ಕೊಡ್ತೀವಿ ಎಂದು ಘಂಟಾಘೋಷವಾಗಿ ಹೇಳಿದ್ರು. ಆದ್ರೆ ಯಾವ ತಿಂಗಳೂ ಸಹ ತಾರೀಕು 18ಕ್ಕಿಂತ ಮುಂಚೆ ಸಂಬಳ ಆಗಿಲ್ಲ. ಇದರಿಂದ ಬೇರೆ ಬೇರೆ ಜಿಲ್ಲೆಯಿಂದ ಪುಡಿಗಾಸಿನ ಸಂಬಳಕ್ಕೆ ಕೆಲಸಕ್ಕೆ ಬಂದಿದ್ದ ಹುಡುಗರು ಊಟಕ್ಕೂ ದುಡ್ಡಿಲ್ಲದೆ ಅವರಿವರ ಬಳಿ ಸಾಲ ಕೇಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಂಬಳ ಕೇಳಿದ ಕಾರಣಕ್ಕೆ ಹಲವಾರು ವಿಡಿಯೋ ಎಡಿಟರ್‌ಗಳನ್ನು ಕೆಲಸದಿಂದ ತೆಗೆದು ಮನೆಗೆ ಕಳುಹಿಸಲಾಗಿತ್ತು. ಕೊನೆಗೆ ರಿಪೋರ್ಟರ್‌ಗಳ ಬುಡಕ್ಕೆ ಕೈ ಹಾಕಿದ್ರೆ ಉಳಿಯತ್ತ ಚಾನಲ್..?
ಚುನಾವಣಾ ಸಂಬಂದ ಇಂದು ಸಂಜೆ 4.30ಕ್ಕೆ ಸರಿಯಾಗಿ ಮೀಟಿಂಗ್ ಕರೆಯಲಾಗಿತ್ತು. ಇಷ್ಟು ದಿನ ತಾಳ್ಮೆಯಿಂದಿದ್ದ ರಿಪೋರ್ಟರ್‌ಗಳು ಇಂದು ಸಂಬಳದ ವಿಚಾರ ಎತ್ತಿದ್ದಾರೆ. ಸಂಬಳ ಕೇಳಿದ ಕಾರಣಕ್ಕೆ ಕೆಂಡಾಮಂಡಲವಾದ ನಂಜುಂಡಿ ಮೂವರು ವರದಿಗಾರರನ್ನು ಕೆಲಸದಿಂದ ಏಕಾಏಕಿ ವಜಾ ಮಾಡಿದ್ದಾರೆ. ಕಾರಣ ಕೇಳಿದ ಉಳಿದ ಪತ್ರಕರ್ತರನ್ನೂ ಸಹ ಹೀನಾಮಾನ ಬೈಯ್ದಿದ್ದಾರೆ. ಪರಿಣಾಮ ಆಂಕರ್ ಹಾಗೂ ಪತ್ರಕರ್ತರು ಸೇರಿ ಒಟ್ಟು 22 ಜನ ಇಂದು ರಾಜೀನಾಮೆ ನೀಡಿದ್ದಾರೆ. ಇವನ್ನೆಲ್ಲಾ ನೋಡುತ್ತಿದ್ದ ಚೀಫ್ ಎಡಿಟರ್ ಶಿವಪ್ರಸಾದ್ ಮೂಕ ಪ್ರೇಕ್ಷಕನಷ್ಟೆ.. ನಾಳೆ ಚುನಾವಣೆಯ ಹಿನ್ನೆಲೆ ಚಾನಲ್ ಆನ್‍ ಏರ್ ಆಗೋದು ಸಹ ಡೌಟಿದೆ.

ಮಂಗನಾಟಕ್ಕೂ..ಎಂಎಲ್‍ಸಿ ಆಸೆಗೂ ಕೊನೆಯಿಲ್ಲ.
ಹಾಗೆ ನೋಡಿದ್ರೆ ನಂಜುಂಡಿಯ ಮೊದಲ ಮಾಧ್ಯಮ ಪ್ರಯಾಣ ಟಿವಿ1 ಏನಲ್ಲ. ಅದು ಆರಂಭವಾಗಿದ್ದು ಬೇರೆ ಸಂಸ್ಥೆಯಿಂದ. ಹೇಗಾದ್ರೂ ಮಾಡಿ ಎಂಎಲ್‍ಸಿ ಕೋಟಾದಲ್ಲಿ ಶಾಸಕನಾಗಬೇಕು ಎಂಬ ಆಸೆ ಹೊತ್ತಿದ್ದ ನಂಜುಂಡಿ ವಿಶ್ವೇಶ್ವರ್ ಭಟ್ ಜತೆ ಸೇರಿ ವಿಶ್ವವಾಣಿ ಎಂಬ ಪತ್ರಿಕೆಯನ್ನು ಆರಂಭಿಸಿದ್ದ. ಆದ್ರೆ ಆಗ ಕಾಂಗ್ರೆಸ್‍ನಲ್ಲಿದ್ದ ಈತನನ್ನು ಯಾರೂ ಮೂಸಿಯೂ ನೋಡಿರಲಿಲ್ಲ. ಈತ ಎಂಎಲ್‍ಸಿ ಸ್ಥಾನಕ್ಕೆ ನಾಲಾಯಕ್ ಎಂದು ಹೊರಗೆ ಕಳುಹಿಸಿದ್ರು. ಹೀಗಾಗಿ ತನ್ನ ಎಂಎಲ್‍ಸಿ ಆಸೆ ಕೈಗೂಡದ ಕಾರಣ ಆತ ವಿಶ್ವವಾಣಿ ಎಂಬ ಪತ್ರಿಕೆಯನ್ನು ಅರ್ಧದಲ್ಲೇ ಕೈಬಿಟ್ಟಿದ್ದ. ಯಾವುದನ್ನೂ ಲಾಭ ನಷ್ಟದ ಲೆಕ್ಕ ಹಾಕಿ ಮಾಡುವ ನಂಜುಂಡಿ ಪಾಲಿಗೆ ಬಿಳಿ ಆನೆಯಂತಾಗಿದ್ದ ವಿಶ್ವವಾಣಿ ಬೇಡದ ಕೂಸಾಗಿ ಬಿಟ್ಟಿತ್ತು. ಪರಿಣಾಮ ಅಲ್ಲೂ ಇದೇ ಸಂಬಳದ ವಿಚಾರವಾಗಿ ತಗಾದೆ ತೆಗೆದು ಪತ್ರಿಕೆಯನ್ನು ನಡುನೀರಿನಲ್ಲಿ ಕೈಬಿಟ್ಟಿದ್ದ. ಈಗಲೂ ಆ ಪತ್ರಿಕೆ ಉಸಿರಾಡಲು ಹೆಣಗಾಡುತ್ತಿದೆ.
ಹೀಗೆ ಕಾಂಗ್ರೆಸ್‍ನಿಂದ ಹೊರಬಂದ ಈತನಿಗೆ ಬಿಜೆಪಿಯೂ ಅದೇ ಬಣ್ಣ ಬಣ್ಣದ ಎಂಎಲ್‍ಎಸ್ ಕನಸ್ಸನ್ನು ತೋರಿಸಿತ್ತು. ಪರಿಣಾಮ ಶಿವಪ್ರಸಾದ್ ಎಂಬ ಮಾಜಿ ಟಿ ವಿ9 ಪತ್ರಕರ್ತನ ಜತೆ ಸೇರಿ ಬಲಪಂಥೀಯ ವಿಚಾರಧಾರೆಯ ನ್ಯೂಸ್ ಚಾನಲ್ ಆರಂಭಿಸಿದ. ಆದ್ರೆ ಇಲ್ಲೂ ಅದೇ ಸಂಬಳದ ವಿಚಾರವಾಗಿ ಪತ್ರಕರ್ತರ ಜತೆಗ ತಗಾದೆ ತೆಗೆದಿದ್ದಾನೆ. ಸರಿಯಾಗಿ ಸಂಬಳವೂ ಇಲ್ಲದೆ, ಮರ್ಯಾದೆಯೂ ಸಿಗದೆ ಇಷ್ಟು ದಿನ ಹೈರಾಣಾಗಿದ್ದ ಪತ್ರಕರ್ತರು ಕೊನೆಗೂ ಇಂದು ಅಕ್ಷರಶಃ ನಂಜುಂಡಿಯ ಬೆವರಿಳಿಸಿದ್ದಾರೆ. ಪತ್ರಕರ್ತರ ಮಾತಿಗೆ ಹಣ್ಣುಗಾಯಿ ನೀರುಗಾಯಿಯಾದ ನಂಜುಂಡಿ ಈಗ ಅಂಡುಸುಟ್ಟ ಬೆಕ್ಕಿನಂತಾಗಿರುವುದು ಮಾತ್ರ ಸುಳ್ಳಲ್ಲ.
ಬೊಂಬಡಾ ಬಾರಿಸುತ್ತಾ ಲಾಂಚ್ ಆದ ಚಾನಲ್ ಒಂದು ಕೇವಲ ಒಂದೇ ತಿಂಗಳಿನಲ್ಲಿ ಇತಿಹಾಸ ಪುಟ ಸೇರಲಿರುವುದು ಮಾತ್ರ ವಿಪರ್ಯಾಸ. ಇನ್ನೂ ಅಲ್ಲಿನ ಉಳಿದ ಉದ್ಯೋಗಿಗಳ ಕಥೆ ಇನ್ನೂ ಶೋಚನೀಯ. ಹಲವರನ್ನು ಟ್ರೈನಿಂಗ್ ನೆಪದಲ್ಲಿ ಮೂರು ತಿಂಗಳುಗಳ ಕಾಲ ಉಚಿತವಾಗಿ ದುಡಿಸಿಕೊಳ್ಳಲಾಗುತ್ತಿದೆ. ಒಟ್ನಲ್ಲಿ ಕೋಟಿ ಕೋಟಿ ಹಣ ಇದ್ದ ಮಾತ್ರಕ್ಕೆ ತಾನು ಯಶಸ್ವಿ ಪತ್ರಿಕೋದ್ಯಮಿಯಾಗಿಬಿಡಬಹುದು ಎಂದು ಹಗಲು ಕನಸು ಕಾಣುವವರ ಪಾಲಿಗೆ ನಂಜುಂಡಿ ಜೀವಂತ ಉದಾಹರಣೆ.

2 thoughts on “ಪತ್ರಿಕೋದ್ಯಮದ ವ್ಯಭಿಚಾರಿ ಕೆ.ಪಿ.ನಂಜುಂಡಿ ಹಾಗೂ ಟಿವಿ1 ಶೆಟರ್ ಎಳೆದ ಕಥೆ….

 • May 12, 2018 at 12:07 AM
  Permalink

  Thuu lofar kpn. Have u ever stayed hunger without money. Thu nin janmake.

  Reply
 • May 13, 2018 at 8:36 PM
  Permalink

  Vishwakram samajdalli dodda vyakti inthaha vykatige sariyagi pata kalisbeku.

  Reply

Leave a Reply

Your email address will not be published.

Social Media Auto Publish Powered By : XYZScripts.com