WATCH : ಟಿವಿ 1 ಕರ್ಮಕಾಂಡ : ರೊಚ್ಚಿಗೆದ್ದ ಪತ್ರಕರ್ತರು : ಬಯಲಾಯ್ತು ಕೆ.ಪಿ ನಂಜುಂಡಿಯ ಅಸಲಿ ಮುಖ

ಪತ್ರಿಕೋದ್ಯಮ ಉದ್ಯಮವಾಗಿರಬಹುದು ಆದರೆ ಪತ್ರಕರ್ತರು ಗುಲಾಮರಲ್ಲ……

ಜನರ ಕಷ್ಟಗಳಿಗೆ, ಸಮಾಜದ ಒಳಿತಿಗಾಗಿ ಕೆಲಸ ಮಾಡಬೇಕಿರುವ ಮಾಧ್ಯಮಗಳ ಪತ್ರಕರ್ತರೇ ಇಂದು ತಿಂಗಳ ಸಂಬಳಕ್ಕಾಗಿ ಅಂಗಲಾಚುವ ಪರಿಸ್ಥಿತಿ ಎದುರಾಗಿದೆ. ಅದಕ್ಕೆ ಉದಾಹರಣೆ ಎಂಬಂತೆ ಇತ್ತೀಚೆಗಷ್ಟೇ ಲೋಕಾರ್ಪಣೆಗೊಂಡಿದ್ದ ಕೆ.ಪಿ ನಂಜುಂಡಿ ಒಡೆತನದ ಕನ್ನಡದ ಟಿವಿ 1 ಸಂಸ್ಥೆ ಪತ್ರಕರ್ತರಿಗೆ ಸಂಬಳ ಕೊಡದೆ, ಬರುವ ಸಂಬಳಕ್ಕೂ ಕತ್ತರಿ ಹಾಕುತ್ತಾ, ಕೊನೆಗೆ ಸರಿಯಾಗಿ ಸಂಬಳ ಕೊಡಿ ಎಂದು ಕೇಳಿದ್ದಕ್ಕೆ ಸಂಸ್ಥೆಯ ನೌಕರರನ್ನೇ ಕೆಲಸದಿಂದ ಕಿತ್ತು ಹಾಕಿದ್ದಾನೆ.

ಕಳೆದ ಕೆಲ ತಿಂಗಳಿನಿಂದಲೂ ಸಂಸ್ಥೆಯಲ್ಲಿ ಇದೇ ರೀತಿ ನಡೆಯುತ್ತಿದ್ದು, ಇಂದು ಪತ್ರಕರ್ತರು ತಾಳ್ಮೆ ಕಳೆದುಕೊಂಡು ನಂಜುಂಡಿಯನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ. ನಮಗೆ ಸರಿಯಾಗಿ ಸಂಬಳ ಸಿಗುತ್ತಿಲ್ಲ. ಸಂಬಳ ಕೊಡಿ ಎಂದು ಕೇಳಿದ್ದಕ್ಕೆ ನಿಮ್ಮ ಹಿನ್ನೆಲೆ ಏನು ಎಂದು ನನಗೆ ಗೊತ್ತು ಎಂದಿದ್ದು, ಸಂಬಳ ಕೇಳಿದವರನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಈಗ ಟಿವಿ 1 ಸಂಸ್ಥೆಯಲ್ಲಿರುವ ಎಲ್ಲಾ ನಿರೂಪಕರು ಹಾಗೂ ವರದಿಗಾರರು ಕೆಲಸಕ್ಕೆ ರಿಸೈನ್‌ ಮಾಡಿದ್ದು, ಸಿಡಿದೆದ್ದಿರುವ ಪತ್ರಕರ್ತರನ್ನು ಸಮಾಧಾನ ಮಾಡಲು ನಂಜುಂಡಿ ಹರಸಾಹಸ ಪಡುತ್ತಿದ್ದಾನೆ.

ಇಷ್ಟೇ ಅಲ್ಲದೆ ಹೆಣ್ಣು ಮಕ್ಕಳಿಗೆ ಕೆಟ್ಟದಾಗಿ ಮಾತನಾಡುವುದು ಎರಡು ಮೂರು ತಿಂಗಳು ಆಫೀಸ್‌ ಬಾಯ್‌ಗಳನ್ನು ಹಗಲು ರಾತ್ರಿ ಎನ್ನದೆ ದುಡಿಸಿಕೊಂಡಿದ್ದ ನಂಜುಂಡಿ, ಸಂಬಳ ಕೇಳಿದ ಕೂಡಲೆ ಅವರನ್ನು ಕೆಲಸದಿಂದ ತೆಗೆದುಹಾಕುವುದು ಈತನ ಖಯಾಲಿ. ಇಷ್ಟೇ ಅಲ್ಲದೆ, ಟಿವಿ 1 ಆಫೀಸ್‌ನಲ್ಲಿ ಮೂಲಸೌಕರ್ಯದ ಕೊರತೆ ಇದ್ದು, ಸರಿಯಾದ ಶೌಚಾಲಯವಿಲ್ಲ. ಈತ ಕಚೇರಿ ಮೇಲೆಯೇ ರಾಜಕೀಯ ಚಟುವಟಿಕೆಗಳನ್ನು ನಡೆಸುತ್ತಿದ್ದು, ಅಲ್ಲಿಗೆ ಬರುವ ರಾಜಕಾರಣಿಗಳಿಗೆ ಕಚೇರಿಯ ಮೇಲಿದ್ದ ಕ್ಯಾಂಟೀನ್‌ನಿಂದಲೇ ಟೀ, ಕಾಫಿ, ತಿಂಡಿ ಸರಬರಾಜು ಮಾಡಲಾಗುತ್ತಿತ್ತು. ತಿಂಗಳುಗಟ್ಟಲೆ ಕಾಫಿ, ಟೀ ಕೊಟ್ಟಿದ್ದಕ್ಕಾಗಿ ಹಣ ಕೇಳಿದ್ದಕ್ಕೆ  ಕ್ಯಾಂಟೀನ್‌ ಮಾಲೀಕರನ್ನು ಬೈದು ಸುಮ್ಮನಾಗಿಸುತ್ತಿದ್ದನಂತೆ.

ನಿರೂಪಕರಿಗೆ ಒದಗಿಸಲಾಗುವ ಬಟ್ಟೆಗಳನ್ನು ಬಾಡಿಗೆಗೆ ತರುತ್ತಿದ್ದು, ಬಾಡಿಗೆ ಹಣ ಕೇಳಲು ಈತನಿಗಾಗಿ ದಿನಗಟ್ಟಲೆ ಕಾದು ಕುಳಿತಿದ್ದೂ ಇದೆ ಎಂದು ಟಿವಿ 1 ಪತ್ರಕರ್ತರೇ ಹೇಳುತ್ತಾರೆ. ಕಚೇರಿಯಿರುವ ಬಿಲ್ಡಿಂಗ್‌ ಕಟ್ಟುವ ವೇಳೆ ಕೂಲಿ ಕಾರ್ಮಿಕರು ದಿನನಿತ್ಯದ ಖರ್ಚಿಗೆ, ತಾವು ದುಡಿದಿದ್ದಕ್ಕಾಗಿ ಹಣ ಕೇಳಿದ್ದಕ್ಕೆ ಅವರೆಲ್ಲರನ್ನು ಹೆದರಿಸಿ  ಪೊಲೀಸರ ಬಳಿ ಕೇಸ್‌ ಹಾಕಿಸಿದ ಘಟನೆಯೂ ನಡೆದಿದೆ. ಆದರೆ ಆತನ ಬಳಿ ಹಣವಿರುವ ಕಾರಣ ಈ ಎಲ್ಲಾ  ತಪ್ಪುಗಳು ಇದುವರೆಗೂ ತೆರೆಗೆ ಬಂದಿರಲಿಲ್ಲ. ಈತ ದುಡ್ಡು ಕೊಡುವುದಿಲ್ಲ ಎಂದು ತಿಳಿದಿರುವ ಅನೇಕ ಪ್ಲಂಬರ್‌ಗಳು ಈತ ಕೆಲಸಕ್ಕೆ ಕರೆದ ಕೂಡಲೆ ತಪ್ಪಿಸಿಕೊಳ್ಳುತ್ತಿದ್ದಾರೆ. ಇನ್ನು ವರದಿಗಾರರಿಗೆ ಕ್ಯಾಬ್‌ ಕೊಡದೆ ಸರಿಯಾದ ಸಮಯಕ್ಕೆ  ಕೆಲಸ ಮುಗಿಸಬೇಕು ಎಂದು ಆಜ್ಞೆ ಮಾಡುತ್ತಿದ್ದ ನಂಜುಂಡಿ. ಹೆಣ್ಣು ಮಕ್ಕಳನ್ನು ಅಸಭ್ಯವಾಗಿ ನಡೆಸಿಕೊಳ್ಳುತ್ತಿದ್ದ. ಅಲ್ಲದೆ ವರದಿಗಾರರು ವರದಿಗಾರಿಕೆಗೆ ಹೋಗುವಾಗ ತಾವೇ ಕ್ಯಾಬ್‌ ಚಾಲನೆ ಮಾಡಿಕೊಂಡು ಹೋಗುವಂತೆ ಸೂಚಿಸುತ್ತಿದ್ದ. ಜೊತೆಗೆ ತಾನು ಹೇಳಿದಂತೆ ಸುದ್ದಿ ಹಾಕಬೇಕು. ವೈಯಕ್ತಿಕವಾಗಿ ಚಾರಿತ್ರಿಕ ಹರಣ ಮಾಡಬೇಕು ಎಂದು ಪತ್ರಕರ್ತರಿಗೆ ಸೂಚಿಸುತ್ತಿದ್ದನಂತೆ. ಮೊದಲು ನೀವು ಸುದ್ದಿ ತನ್ನಿ ಬಳಿಕ ನಾನು ಹೇಳಿದಂತೆ ಹಾಕಿ. ಮಿಕ್ಕಿದ್ದನ್ನು ನಾನು ನೋಡಿಕೊಳ್ಳುತ್ತೇನೆ ಎನ್ನುತ್ತಿದ್ದನಂತೆ.

ಈತ ಟಿವಿ 1 ಸಂಸ್ಥೆಯನ್ನು ಮಾತ್ರವಲ್ಲ. ಇದೇ ರೀತಿ ಜನಶ್ರೀ, ಕಸ್ತೂರಿ, ವಿಶ್ವವಾಣಿ, ಫೋಕಸ್, ಸಮಯದಂತಹ ಸಂಸ್ಥೆಗಳನ್ನು ತೆರೆದು ನೌಕರರಿಗೆ, ಪತ್ರಕರ್ತರಿಗೆ ಪಂಗನಾಮಿ ಹಾಕಿದ್ದಾನೆ. ಇಷ್ಟೆಲ್ಲಾ ಆದ ಬಳಿಕ ಏನೂ ಮಾತನಾಡದ, ನಂಜುಂಡಿಯ ಬೈಗುಳವನ್ನು ಸುಮ್ಮನೆ ಕಿವಿ ಕೊಟ್ಟು ಕೇಳುತ್ತಿದ್ದ ಸಂಸ್ಥೆಯ ಸಂಪಾದಕರಾಗಿರುವ ಶಿವ ಪ್ರಸಾದ್‌ ಅವರನ್ನೂ ಕೆಲಸದಿಂದ ತೆಗೆದುಹಾಕಿದ್ದಾನೆ ಆ ನಂಜುಂಡಿ.

ಪತ್ರಕರ್ತರೇ ಇನ್ನು ಮುಂದೆ ಯಾವುದೇ ಮಾಧ್ಯಮಕ್ಕೆ ಸೇರುವ ಮುನ್ನ ಇಂತಹವರ ಬಗ್ಗೆ ಎಚ್ಚರದಿಂದಿದ್ದರೆ ಒಳಿತು.

 

3 thoughts on “WATCH : ಟಿವಿ 1 ಕರ್ಮಕಾಂಡ : ರೊಚ್ಚಿಗೆದ್ದ ಪತ್ರಕರ್ತರು : ಬಯಲಾಯ್ತು ಕೆ.ಪಿ ನಂಜುಂಡಿಯ ಅಸಲಿ ಮುಖ

 • May 12, 2018 at 8:41 PM
  Permalink

  ಇವರಿಗೆಲ್ಲಾ ಯಾವ ಸಾಮಾಜಿಕ ಬದ್ದತೆಯು ಇಲ್ಲ ಸಂಪೂರ್ಣ ವ್ಯಾಪಾರಿ ಮನೋಭಾವ&ಪತ್ರಿಕೋದ್ಯಮ ದ ಗಂಧಗಾಳಿಯು ಇಲ್ಲ,ಇಂತಹವರ ವಿರುದ್ಧ ಸಂಘಟಿತರಾಗಿ ಹೋರಾಡಿ ಜಯ ನಮ್ಮದೇ.

  Reply
 • May 13, 2018 at 10:56 PM
  Permalink

  Good job, publish all t v chnneles and news papers , Gomukka vyagrarantha ee mosagaararanna yellarigu gottaguvante maadi, amayakaru mossa ogodu Beda. Tkanks.

  Reply
 • May 13, 2018 at 11:32 PM
  Permalink

  ನಮ್ಮದೊಂದು ಸಲಹೆ ಯಾವುದನ್ನು ಪ್ರಚೋದನೆ ಮಾಡುವ ಅವಶ್ಯಕತೆ ಇಲ್ಲ ಕುಳಿತು ಮಾತಾನಾಡಿದರೆ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತದೆ ಧನ್ಯವಾದಗಳು

  Reply

Leave a Reply

Your email address will not be published.