SHOCKING : ನೀಟ್‌ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿನಿಯ ಒಳಉಡುಪು ಬಿಚ್ಚಿಸಿದ ಮೇಲ್ವಿಚಾರಕರು !

ಪಾಲಕ್ಕಾಡ್‌ : ಕಳೆದ ಭಾನುವಾರ ದೇಶದ ಎಲ್ಲೆಡೆ ನೀಟ್‌ ಪರೀಕ್ಷೆ ನಡೆಸಲಾಗಿತ್ತು. ಇದೇ ಸಂದರ್ಭದಲ್ಲಿ ಕೇರಳದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಒಳ ಉಡುಪು ತೆಗೆಸಿರುವ ಘಟನೆ ನಡೆದಿದೆ.

ಕೇರಳದ ಪಾಲಕ್ಕಾಡ್‌ನ ಲಯನ್ಸ್‌ ಶಾಲೆಯಲ್ಲಿ  ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆ ಬರೆಯುವ ಸಲುವಾಗಿ ಶಾಲೆಗೆ ಬಂದಿದ್ದಾಳೆ. ಈ ವೇಳೆ ವಿದ್ಯಾರ್ಥಿನಿ ಮೆಟಲ್‌ ಹುಕ್‌ ಹೊಂದಿದ್ದ ಒಳ ಉಡುಪು ಧರಿಸಿದ್ದು, ಪರೀಕ್ಷಾ ಮೇಲ್ವಿಚಾರಕರು ಸೂಚಿಸಿದಂತೆ ತಪಾಸಣೆ ಮಾಡುವವು ಒಳಉಡುಪನ್ನು ತೆಗೆಸಿದ್ದಾರೆ ಎಂದು ವಿದ್ಯಾರ್ಥಿನಿ  ದೂರಿದ್ದಾರೆ.

ಪುರುಷ ವೀಕ್ಷಕರು ಪರಿಶೀಲನೆ ನಡೆಸಿದ್ದು, ಮೆಟಲ್‌ ಹುಕ್‌ ಇದ್ದ ಕಾರಣ ಒಳ ಉಡುಪನ್ನು ತೆಗೆಸಿದ್ದು, ಮುಜುಗರದಿಂದಾಗಿ ಸರಿಯಾಗಿ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ ಎಂದು ವಿದ್ಯಾರ್ಥಿನಿ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ.

ನೊಂದ ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆಕೆಯೊಂದಿಗೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಯರ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಕಳೆದ ವರ್ಷವೂ ಕೇರಳದ ಕಣ್ಣೂರಿನಲ್ಲಿ ಇದೇ ರೀತಿಯ ಪ್ರಸಂಗ ನಡೆದಿದದ್ದು ವಿವಾದಕ್ಕೆ ಕಾರಣವಾಗಿತ್ತು.

Leave a Reply

Your email address will not be published.

Social Media Auto Publish Powered By : XYZScripts.com