ಮೈಸೂರು : ಚುನಾವಣಾ ಆಯೋಗದಿಂದ ಮಹಿಳೆಯರಿಗಾಗಿ ‘ಸಖಿ’ ಪಿಂಕ್ ಬೂತ್ ವ್ಯವಸ್ಥೆ

ಚುನಾವಣಾ ಆಯೋಗದಿಂದ ಮೈಸೂರಿನಾದ್ಯಂತ ಮಹಿಳೆಯರಿಗಾಗಿ ಸಖಿ ಪಿಂಕ್ ಬೂತ್ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತದಾರರು ಮತದಾನ ಮಾಡಲು ಈ ವ್ಯವಸ್ಥೆ ಮಾಡಲಾಗಿದೆ. ವಿಶೇಷವಾಗಿ ಮಹಿಳೆಯರ ವೋಟಿಂಗ್ ಪರ್ಸೆಂಟೆಂಜ್ ಹೆಚ್ಚಿಸಲು ಪ್ಲ್ಯಾನ್ ಮಾಡಲಾಗಿದೆ. ಚುನಾವಣಾ ಆಯೋಗದಿಂದ ಈ ವಿಶೇಷ ‘ಸಖಿ’ಯ ಯೋಜನೆ ಮಾಡಲಾಗಿದೆ.

ಮೈಸೂರಿನ ಅಗ್ರಹಾರದಲ್ಲಿ ನಾಳೆಯ ಮತದಾನಕ್ಕೆ ಸಂಪೂರ್ಣ ಸಿದ್ದತೆ ನಡೆಸಲಾಗಿದ್ದು, ಅಕ್ಕನ ಬಳಗ ಶಾಲೆಯಲ್ಲಿ ಪಿಂಕ್ ಬೂತ್ ರೆಡಿಯಾಗಿದೆ. ಸಂಪೂರ್ಣವಾಗಿ ಪಿಂಕ್‌ಮಯವಾಗಿರುವ ವಿಶೇಷ ಬೂತ್‌ನ ಟೇಬಲ್‌ನಿಂದ ಹಿಡಿದು ಮತದಾನ ಮಾಡುವ ಟೆಬಲ್ ವರೆಗೂ ಸಂಪೂರ್ಣ ಪಿಂಕ್ ಆಗಿದೆ. ಮೊದಲ ಬಾರಿ ಮತದಾನ ಮಾಡುತ್ತಿರುವವರಿಗೂ ಪಿಂಕ್ ಬ್ರೌಶ್ಚರ್‌ನಲ್ಲೇ ಮತದಾನ ಹೇಗೆ ಮಾಡುವುದು ಎಂದು ಸಲಹೆ ನೀಡಲಾಗಿದೆ.

Leave a Reply

Your email address will not be published.