ಪ್ರಧಾನಿ ಮೋದಿ ಹತ್ಯೆಗೆ ಐಸಿಸ್ ಉಗ್ರರಿಂದ ಸಂಚು….ಮಾಹಿತಿಯಲ್ಲಿದೆ ಆಘಾತಕಾರಿ ಸಂಗತಿ !

ಅಹಮದಾಬಾದ್‌ : ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ಐಸಿಸ್‌ ಉಗ್ರರು ಸಂಚು ರೂಪಿಸಿರುವ ವಿಷಯ ಬೆಳಕಿಗೆ ಬಂದಿದೆ.
ಮೋದಿ ಅವರನ್ನು ಸ್ನೈಪರ್‌ ರೈಫಲ್‌ನಲ್ಲಿ ಹತ್ಯೆ ಮಾಡೋಣ ಎಂದು ಶಂಕಿತ ಐಸಿಸ್‌ ಉಗ್ರ ಉಬೈದ್‌ ಮಿರ್ಜಾ  ಸಂದೇಶ ರವಾನಿಸಿದ್ದು, ಆನ್‌ಲೈನ್‌ ಮೆಸೇಜಿಂಗ್‌ ಆ್ಯಪ್‌ನಲ್ಲಿ ಮಾತುಕತೆಯ ವಿವರಗಳು ಸಿಕ್ಕಿವೆ.
 
ಉಬೈದ್‌, ಸ್ಟಿಂಬರ್‌ ವಾಲಾ ಎಂಬಾತನಿಗೆ ಸಂದೇಶ ರವಾನಿಸಿದ್ದು, ಈ ದಾಖಲೆಗಳನ್ನು ಗುಜರಾತ್‌ ಎಟಿಎಸ್‌ನವರು ವಶಪಡಿಸಿಕೊಂಡಿದ್ದಲ್ಲದೆ ಗುಜರಾತ್‌ ಕೋರ್ಟ್‌ನಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. ಗುಜರಾತ್‌ ಎಟಿಎಸ್‌ಗೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಪಿಸ್ತೂಲ್‌ ಕೊಂಡುಕೊಳ್ಳೋಣ. ಬಳಿಕ ಅವನ ಜೊತೆ ಸಂಪರ್ಕ ಹೊಂದೋಣ ಎಂದು 2016ರಲ್ಲಿ ರಾತ್ರಿ ಸಂದೇಶ ಕಳಿಸಿದ್ದಾನೆ. ಅಲ್ಲದೆ ಫೆರಾರಿ ಎಂದು ಮೊಬೈಲ್‌ನಲ್ಲಿ ಹೆಸರಿಟ್ಟುಕೊಂಡಿದ್ದು ಮೋದಿಯನ್ನು ಸ್ನೈಪರ್‌ ರೈಫಲ್‌ನಿಂದ ಹತ್ಯೆ ಮಾಡೋಣ ಎಂದು ಪ್ರತಿಕ್ರಿಯೆ ನೀಡಿರುವುದಾಗಿ ತಿಳಿದುಬಂದಿದೆ.
ಸದ್ಯ ಇಬ್ಬರು ಉಗ್ರರೂ ಪೊಲೀಸರ ವಶದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published.

Social Media Auto Publish Powered By : XYZScripts.com