ಅವನು ಇವಳಾದ, ಇವಳು ಅವನಾದ : ಕೇರಳದಲ್ಲಿ ಶಾಸ್ತ್ರೋಕ್ತವಾಗಿ ಮದುವೆಯಾದ ಲಿಂಗಪರಿವರ್ತಿತ ಜೋಡಿ

ತಿರುವನಂತಪುರಂ : ಸಂಪ್ರದಾಯದಂತೆ 33 ವರ್ಷದ ಲಿಂಗ ಪರಿವರ್ತಿತ ಯುವಕ ಇಶಾನ್‌ ಕೆ.ಶಾನ್‌ ಹಾಗೂ 31 ವರ್ಷದ ಲಿಂಗಪರಿವರ್ತಿತ ಮಹಿಳೆ ಸೂರ್ಯ ಕೇರಳದಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವ ರ ಮದುವೆ ಸಮಾರಂಭದಲ್ಲಿ ಎರಡೂ ಕುಟುಂಬದವರು. ಸ್ನೇಹಿತರು, ಸಂಬಂಧಿಕರು ಭಾಗಿಯಾಗಿದ್ದು, ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಲಿಂಗಪರಿವರ್ತಿತರು ದಂಪತಿಯಾಗಿ ಹೊಸ ದಾಖಲೆ ಬರೆದಿದ್ದಾರೆ.

ಲಿಂಗ ಪರಿವರ್ತನೆ ಮಾಡಿಕೊಂಡು ಪುರುಷರಾಗಿರುವ ಇಶಾನ್‌ ಹಾಗೂ ಹೆಣ್ಣಾಗಿ ಬದಲಾಗಿರುವ ಸೂರ್ಯ ಗುರುವಾರ ವಿವಾಹವಾಗಿದ್ದಾರೆ. ಕೇರಳದ ಮನ್ನಂ ಸ್ಮಾರಕ ರಾಷ್ಟ್ರೀಯ ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ  ವಿಶೇಷ ವಿವಾಹ ಕಾಯ್ದೆಯಡಿ ಮದುವೆಯಾಗಿದ್ದಾರೆ. ಕೇರಳದಲ್ಲಿ ಲಿಂಗ ಪರಿವರ್ತನೆ ಮಾಡಿಕೊಂಡವರು ಇದೇ ಮೊದಲ ಬಾರಿಗೆ ಮದುವೆಯಾಗಿದ್ದಾರೆ.

ನನ್ನ ಪೋಷಕರಿಗೆ ನೋವುಂಟು ಮಾಡುವುದು ನನಗೆ ಇಷ್ಟವಿಲ್ಲ. ಹಾಗಾಗಿ ನನ್ನ ಜೀವನದಲ್ಲಿ ನಾನು ಸಬೀನಾ ನಿಂದ ಇಶಾನ್ ಆಗಲು ಸಾಕಷ್ಟು ಕಷ್ಟಪಟ್ಟಿದ್ದೇನೆ. ಇದಕ್ಕೆ ನನ್ನ ಪೋಷಕರ ಸಹಾಯ ಹಾಗೂ ಆರ್ಶೀವಾದ ಕೂಡ ನನಗೆ ಬೇಕಾಗಿತ್ತು. ನಂತರ ನನ್ನ ಮದುವೆಯಲ್ಲಿ ನನ್ನ ತಂದೆ, ತಾಯಿ ಹಾಗೂ ನನ್ನ ಸಹೋದರಿ ಮದುವೆಯಲ್ಲಿ ಭಾಗಿಯಾಗಿದ್ದರಿಂದ ನನಗೆ ಬಹಳ ಸಂತೋಷವಾಯಿತು ಎಂದು ವರ ಇಶಾನ್ ತಿಳಿಸಿದ್ದಾರೆ

 

Leave a Reply

Your email address will not be published.

Social Media Auto Publish Powered By : XYZScripts.com