IPL : ಪ್ರೀತಿ – ಸೆಹ್ವಾಗ್ ನಡುವೆ ಮಾತಿನ ಚಕಮಕಿ : ಹತಾಶೆಗೆ ಕಾರಣವಾಯಿತೇ ಸೋಲು..?

11ನೇ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ 6ನ್ನು ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಮೊದಲ ಬಾರಿಗೆ ನಾಯಕತ್ವ ವಹಿಸಿಕೊಂಡಿರುವ ಅಶ್ವಿನ್ ಬಳಗ ಈ ಬಾರಿ ಪ್ಲೇ ಆಫ್ ಹಂತವನ್ನು ತಲುಪುವ ಸಾಧ್ಯತೆಗಳೂ ಇವೆ.

ಆದರೆ ಪಂಜಾಬ್ ತಂಡದ ಒಡತಿ ಪ್ರೀತಿ ಜಿಂಟಾ ಹಾಗೂ ಮೆಂಟರ್ ವೀರೆಂದ್ರ ಸೆಹ್ವಾಗ್ ಇವರಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಜೈಪುರದ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಮೇ 8 ರಂದು ರಾಜಸ್ಥಾನ ರಾಯಲ್ಸ್ ಹಾಗೂ KXIP ತಂಡಗಳ ನಡುವೆ ನಡೆದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ 15 ರನ್ ಅಂತರದ ಸೋಲನುಭವಿಸಿತ್ತು.

ಪಂದ್ಯದ ಬಳಿಕ ಸೋಲಿನ ಹತಾಶೆಯಲ್ಲಿದ್ದ ಪ್ರೀತಿ ಜಿಂಟಾ ಮೆಂಟರ್ ವೀರೆಂದ್ರ ಸೆಹ್ವಾಗ್ ಮೇಲೆ ಕೂಗಾಡಿದ್ದಾರಂತೆ. ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್. ಅಶ್ವಿನ್ ಅವರನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಕಳುಹಿಸಿರುವ ವಿಷಯದಲ್ಲಿ ಇಬ್ಬರ ನಡುವೆ ಜಗಳವಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ಅಶ್ವಿನ್ ಶೂನ್ಯಕ್ಕೆ ಔಟಾಗಿದ್ದರು.

Leave a Reply

Your email address will not be published.