IPL : ಧವನ್-ವಿಲಿಯಮ್ಸನ್ ಅಬ್ಬರಕ್ಕೆ ಮಣಿದ ಡೆಲ್ಲಿ : ಪ್ಲೇ-ಆಫ್ ಹಂತಕ್ಕೆ ಸನ್ ರೈಸರ್ಸ್

ಗುರುವಾರ ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಐಪಿಎಲ್ ಟಿ-20 ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 9 ವಿಕೆಟ್ ಗಳಿಂದ ಭರ್ಜರಿ ಜಯ ಗಳಿಸಿದೆ. ಈ ಗೆಲುವಿನ ಮೂಲಕ ಕೇನ್ ವಿಲಿಯಮ್ಸನ್ ಬಳಗ ಪ್ಲೇ ಆಫ್ ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಡೆಲ್ಲಿ, 20 ಓವರುಗಳಲ್ಲಿ 5 ವಿಕೆಟ್ ನಷ್ಟಕ್ಕೆ 187 ರನ್ ಮೊತ್ತ ಸೇರಿಸಿತು. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ರಿಷಭ್ ಪಂತ್ ಅಜೇಯ ಶತಕ ಬಾರಿಸಿದರು. 63 ಎಸೆತಗಳನ್ನು ಎದುರಿಸಿದ ಪಂತ್ 15 ಬೌಂಡರಿ ಹಾಗೂ 7 ಸಿಕ್ಸರ್ ಸಿಡಿಸಿ 128 ರನ್ ಗಳಿಸಿದರು.

ಗುರಿಯನ್ನು ಬೆನ್ನತ್ತಿದ ಸನ್ ರೈಸರ್ಸ್ 18.5 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 191 ರನ್ ಸೇರಿಸಿ ಭರ್ಜರಿ 9 ವಿಕೆಟ್ ಗೆಲುವು ಸಾಧಿಸಿತು. ಹೈದ್ರಾಬಾದ್ ಪರವಾಗಿ 176 ರನ್ ಗಳ ಜೊತೆಯಾಟವಾಡಿದ ಶಿಖರ್ ಧವನ್ 92, ಕೇನ್ ವಿಲಿಯಮ್ಸನ್ 83 ರನ್ ಗಳಿಸಿದರು.

 

Leave a Reply

Your email address will not be published.

Social Media Auto Publish Powered By : XYZScripts.com