ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಪ್ರಜ್ವಲ್‌ ರೇವಣ್ಣನಿಂದ ಗೂಂಡಾಗಿರಿ : ವಿಡಿಯೋ ವೈರಲ್‌

ದಿನದಿನಕ್ಕೆ ರೇವಣ್ಣನ ಪುತ್ರನ ದೌರ್ಜನ್ಯ ಹೆಚ್ಚಾಗುತ್ತಿದೆ. ಇಂದೂ ಕೂಡ ಮನೆ ಮನೆ ಪ್ರಚಾರದ ವೇಳೆ ಕಾಂಗ್ರೆಸ್ ಕಾರ್ಯಕರ್ತನ ಮನೆ ಮುಂದೆ ಪುಂಡ ರೌಡಿಗಳನ್ನು ಬಿಟ್ಟು ಹಲ್ಲೆ ಮಾಡಿಸಿದ್ದಾರೆ. ಇಂತಹದ್ದೊಂದು ಘಟನೆ ಹೊಳೆನರಸೀಪುರ ಪಟ್ಟಣದ ಕೋಟೆ ಬೀದಿಯ ಕಡುವಿನಕೋಟೆ ರಾಜುಗೌಡ ಮನೆಯ ಮುಂದೆ ಈ ಘಟನೆ ನಡೆದಿದೆ.

ಫಾರ್ಚುನರ್ ಕಾರಿನಲ್ಲಿ ಬಂದ ಪ್ರಜ್ವಲ್ ಏಕಾಏಕಿ ಕಾರ್ಯಕರ್ತನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ಇದನ್ನು ಪ್ರಶ್ನಿಸಿದ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಪ್ರಜ್ವಲ್ ದೌರ್ಜನ್ಯ ಎಸಗಿದ್ದಾನೆ. ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ಮಾಡ್ತೀರಾ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಆವಾಜ್ ಹಾಕಿದ್ದಾರೆ.

ಭವಾನಿ ರೇವಣ್ಣ ವಿರುದ್ಧ ಹಳೇ ಕೋಟೆಯಿಂದ ಜಿಲ್ಲಾ ಪಂಚಾಯಿತಿಗೆ ಸ್ಪರ್ಧಿಸಿದ್ದ ಸುನೀಲ್ ಕುಮಾರ್ ಎಂಬುವರ ಸಹೋದರ ಸುದರ್ಶನ್ ಮೇಲೆ ಪ್ರಜ್ವಲ್‌ ಹಲ್ಲೆ ನಡೆಸಿದ್ದಾರೆ. ರಸ್ತೆಯ ಬದಿಯಲ್ಲಿಯೇ ಎಲ್ಲರ ಸಮ್ಮುಖದಲ್ಲಿ ಪ್ರಜ್ವಲ್ ಕೂಗಾಡಿ ರಂಪಾಟ ಮಾಡಿ ಕಾರ್ಯಕರ್ತರನ್ನು ಬೆದರಿಸುವ ಕೃತ್ಯಕ್ಕೆ ಕೈಹಾಕಿದ್ದು ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

Leave a Reply

Your email address will not be published.

Social Media Auto Publish Powered By : XYZScripts.com