ತೀವ್ರ ನೋವಿನಿಂದ ಬಳಲುತ್ತಿದ್ದಾರಂತೆ ಯಜಮಾನ ದರ್ಶನ್‌…….ಯಾಕೆ ?

ಚಾಲೆಂಜಿಂಗ್ ಸ್ಟಾರ್‌ ದರ್ಶನ್‌ ಸದ್ಯ ಯಜಮಾನ ಸಿನಿಮಾದ ಚಿತ್ರೀಕರಣದಿಂದ ಬ್ರೇಕ್‌ ತೆಗೆದುಕೊಂಡಿದ್ದಾರೆ. ದರ್ಶನ್‌ ಕೈಗೆ ಪೆಟ್ಟಾದ ಕಾರಣ ರೆಸ್ಟ್‌ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.

ಇತ್ತೀಚೆಗಷ್ಟೇ ಚಿಕ್ಕಮಗಳೂರಿನಲ್ಲಿ ಯಜಮಾನ ಚಿತ್ರದ ಚಿತ್ರೀಕರಣ ನಡೆಯುವ ಸಂದರ್ಭದಲ್ಲಿ ದರ್ಶನ್‌ ಅವರಿಗೆ ಕೈ ನೋವು ಕಾಣಿಸಿಕೊಂಡಿದೆ. ಆದರೆ ಇವರಿಗೆ ಯಜಮಾನ ಸಿನಿಮಾದ ವೇಳೆ ಯಾವುದೇ ತೊಂದರೆಯಾಗಿಲ್ಲ. ಈ ಹಿಂದೆ ಚಿತ್ರೀಕರಣದ ಸಮಯದಲ್ಲಿ ದರ್ಶನ್‌ ಕೈಗೆ ಗಾಯವಾಗಿದ್ದು, ಈಗ ಅದರ ನೋವು ಕಾಣಿಸಿಕೊಂಡಿದೆ.

ಚಿಕ್ಕಮಗಳೂರಿನಲ್ಲಿ ಯಜಮಾನ ಚಿತ್ರದ ಚಿತ್ರೀಕರಣದ ವೇಳೆ ಹಳೆಯ ಗಾಯದ ನೋವು ಕಾಣಿಸಿಕೊಂಡಿದ್ದು, ಜೊತೆಗೆ ಕಾಲು  ಸಹ ಟ್ವಿಸ್ಟ್‌ ಆಗಿದೆ. ಆದ್ದರಿಂದ ಮೇ 2 ರಿಂದ ಯಜಮಾನ ಸಿನಿಮಾ ತಂಡ ರೆಸ್ಟ್‌ ತೆಗೆದುಕೊಳ್ಳುತ್ತಿದೆ.

Leave a Reply

Your email address will not be published.