ಉನ್ನಾವೋ ಪ್ರಕರಣ : ಬಿಜೆಪಿ ಶಾಸಕ ಅತ್ಯಾಚಾರ ನಡೆಸಿದ್ದು ಸತ್ಯ ಎಂದು ದೃಢಪಡಿಸಿದ CBI

ಲಖನೌ : ಉತ್ತರ ಪ್ರದೇಶದ ಉನ್ನಾವೋನಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ  ಬಿಜೆಪಿ ಶಾಸಕ ಕುಲ್‌ದೀಪ್‌ ಸೇಂಗಾರ್‌  ವಿರುದ್ದದ ಆರೋಪ ಸತ್ಯ ಎಂದು ಸಿಬಿಐ ಹೇಳಿದೆ.
ಸೇಂಗಾರ್‌ನ ನಿಕಟವರ್ತಿ ಶಶಿಸಿಂಗ್‌ ಎಂಬಾತ ಮಹಿಳೆಯನ್ನು ಉದ್ಯೋಗ ಕೊಡಿಸುವ ನೆಪದಲ್ಲಿ ಸೇಂಗಾರ್‌ ಮನೆ ಗೆ ಕರೆತಂದಿದ್ದು ನಿಜ ಎಂದು ಸಿಬಿಐ ದೃಢಪಡಿಸಿದ್ದು, ಸೇಂಗಾರ್‌ ಅತ್ಯಾಚಾರ ಮಾಡಿರುವುದು ಸತ್ಯ ಎನ್ನಲಾಗಿದೆ.
ಜೂನ್‌. 4 2017ರಂದು ಉತ್ತರ ಪ್ರದೇಶದ ಮಖಿ ಎಂಬ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ಪ್ರಕರಣದಲ್ಲಿ ಬಿಜೆಪಿ ಶಾಸಕ ಕುಲದೀಪ್‌ ಸಿಂಗ್‌ ಸೇಂಗಾರ್‌ ಹೆಸು ಕೇಳಿಬಂದಿತ್ತು. ಘಟನೆ ನಡೆದ ಒಂದು ವರ್ಷದ ಬಳಿಕ ಯುವತಿಯ ಕುಟುಂಬಸ್ಥರು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಮನೆ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಹಘಟನೆ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು. ಇದೇ ಸಂದರ್ಭದಲ್ಲಿ ಯುವತಿಯ ತಂದೆ ಪೊಲೀಸ್‌ ಕಸ್ಟಡಿಯಲ್ಲೇ ಸಾವಿಗೀಡಾಗಿದ್ದು ವಿವಾದಕ್ಕೆ ಕಾರಣವಾಗಿತ್ತು.
ಈ ಎಲ್ಲಾ ಘಟನೆಗಳು ನಡೆದ ಬಳಿಕ ಯೋಗಿ ಸರ್ಕಾರ ಪ್ರಕರಣವನ್ನು ಸಿಸಿಬಿಗೆ ವಹಿಸಿ ಕೈತೊಳೆದುಕೊಂಡಿದ್ದು, ಶಾಸಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು. ಇದಾದ ಬಳಿಕ ಶಾಸಕನನ್ನು ಬಂಧಿಸಿದ್ದು, ವೈದ್ಯಕೀಯ ಮಾಹಿತಿ ಕುರಿತು ಹೇಳಿಕೆ ನೀಡಿರುವ ಪೊಲೀಸರು, ಬಾಲಕಿ ಮೇಲೆ ಶಾಸಕ ಅತ್ಯಾಚಾರ ನಡೆಸಿರುವುದು ನಿಜ ಎಂದು ದೃಢಪಡಿಸಿದ್ದಾರೆ.
 ಸಿಬಿಐ ಬಿಜೆಪಿ ಶಾಸಕನ ಪಾತ್ರವಿರುವುದಾಗಿ ದೃಢಪಡಿಸಿರುವ ಹಿನ್ನಲೆಯಲ್ಲಿ ಅತ್ಯಾಚಾರ ಸಂತ್ರಸ್ತೆ ಹಾಗೂ ಕುಟುಂಬಸ್ಥರು ಶಾಸಕನಿಗೆ ಮರಣ ದಂಡನೆ ನೀಡುವಂತೆ ಆಗ್ರಹಿಸುತ್ತಿದ್ದಾರೆ.

2 thoughts on “ಉನ್ನಾವೋ ಪ್ರಕರಣ : ಬಿಜೆಪಿ ಶಾಸಕ ಅತ್ಯಾಚಾರ ನಡೆಸಿದ್ದು ಸತ್ಯ ಎಂದು ದೃಢಪಡಿಸಿದ CBI

Leave a Reply

Your email address will not be published.

Social Media Auto Publish Powered By : XYZScripts.com