ಕ್ಯಾನ್ಸರ್ ಪೀಡಿತ ಪುಟ್ಟ ಅಭಿಮಾನಿಯನ್ನು ಭೇಟಿಯಾದ ಯುವಿ : ಟ್ವಿಟರ್ನಲ್ಲಿ ವ್ಯಕ್ತವಾದ ಮೆಚ್ಚುಗೆ

ಆಲ್ರೌಂಡರ್ ಯುವರಾಜ್ ಸಿಂಗ್ ಟೀಮ್ ಇಂಡಿಯಾ ಕ್ರಿಕೆಟ್ ಕಂಡ ಶ್ರೇಷ್ಟ ಆಟಗಾರರಲ್ಲಿ ಒಬ್ಬರು. ಭಾರತ 2011ರ ವಿಶ್ವಕಪ್ ಗೆಲ್ಲುವಲ್ಲಿ ಯುವರಾಜ್ ಸಿಂಗ್ ಮಹತ್ವದ ಪಾತ್ರ ವಹಿಸಿದ್ದರು. ಮ್ಯಾನ್ ಆಫ್ ದಿ ಸಿರೀಸ್ ಎನಿಸಿಕೊಂಡಿದ್ದ ಯುವರಾಜ್ ಟೂರ್ನಿಯಲ್ಲಿ 362 ರನ್ ಗಳಿಸಿ 15 ವಿಕೆಟ್ ಪಡೆದಿದ್ದರು.

ಅದಾದ ಬಳಿಕ ಯುವರಾಜ್ ಸಿಂಗ್ ಅವರು ಕ್ಯಾನ್ಸರ್ ಎಂಬ ಮಾರಕ ರೋಗದಿಂದ ಬಳಲಿದ್ದರು. ಅಮೇರಿಕದಲ್ಲಿ ತಿಂಗಳುಗಟ್ಟಲೇ ಚಿಕಿತ್ಸೆ ಪಡೆದ ಯುವಿ ಅಮ್ಮನ ಆರೈಕೆ, ಅಭಿಮಾನಿಗಳ ಹಾರೈಕೆ ಹಾಗೂ ತಮ್ಮ ಮನೋಸ್ಥೈರ್ಯದಿಂದ ಕ್ಯಾನ್ಸರ್ ಅನ್ನು ಸೋಲಿಸಿ, ಗುಣಮುಖರಾಗಿ ಮತ್ತೆ ಕ್ರಿಕೆಟ್ ಮೈದಾನಕ್ಕೆ ಕಾಲಿಟ್ಟಿದ್ದರು. ನಂತರ ಕ್ಯಾನ್ಸರ್ ಪೀಡಿತರಿಗೆ ಸಹಾಯ ಮಾಡಲು ಮುಂದಾದ ಯುವರಾಜ್ ಯುವಿಕ್ಯಾನ್ (YouWeCan) ಎಂಬ ಸಂಸ್ಥೆಯನ್ನು ತೆರೆದಿದ್ದರು.

Image result for rocky yuvraj singh cancer

ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಪರವಾಗಿ ಆಡುತ್ತಿರುವ ಯುವರಾಜ್, ಕ್ಯಾನ್ಸರ್ ಪೀಡಿತ ಪುಟ್ಟ ಅಭಿಮಾನಿಯನ್ನು ಭೇಟಿಯಾಗಿದ್ದಾರೆ. 11 ರಾಕಿ ಎಂಬ ಕ್ಯಾನ್ಸರ್ ಪೀಡಿತ ಬಾಲಕ ಯುವಿಯನ್ನು ಭೇಟಿಯಾಗಿ ಸಂತಸಗೊಂಡಿದ್ದಾನೆ. ಟ್ವಿಟರ್ ನಲ್ಲಿ ಫೋಟೊಗಳನ್ನು ಹಂಚಿಕೊಂಡಿರುವ ಯುವರಾಜ್, ರಾಕಿ ಬೇಗನೇ ಗುಣಮುಖನಾಗಲೆಂದು ಹಾರೈಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com