ಮುಂದುವರಿದ ಐಟಿ ಬೇಟೆ : ಕಾಂಗ್ರೆಸ್‌ ನಾಯಕ ಖೇಣಿ, ವಿನಯ್‌ ಕುಲಕರ್ಣಿಗೆ ಶಾಕ್‌ ನೀಡಿದ ಅಧಿಕಾರಿಗಳು

ಬೀದರ್‌ : ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಐಟಿ ಅಧಿಕಾರಿಗಳ ಬೇಟೆ ಜೋರಾಗಿ ನಡೆಯುತ್ತಿದೆ. ಈ ಬಾರಿ ಶಾಸಕ, ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್‌ ಖೇಣಿ ಅ ವರ ನಿವಾಸದ ಮೇಲೆ ದಾಳಿ  ನಡೆಸಿದ್ದಾರೆ.

ಬೀದರ್‌ನ ರಾಂಪುರದಲ್ಲಿರುವ ಖೇಣಿ ಅವರ ನಿವಾಸದ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆಯ  10ಕ್ಕೂ ಹೆಚ್ಚು ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಅಶೋಕ್‌ ಖೇಣಿ ಮತದಾರರಿಗೆ ಹಣ ಹಂಚಲು ಸಿದ್ದತೆ ಮಾಡಿಕೊಂಡಿದ್ದಾರೆ ಎಂಬ ಶಂಕೆಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿರುವುದಾಗಿ ತಿಳಿದುಬಂದಿದೆ.

ಮತ್ತೊಂದೆಡೆ ಸಚಿವ ವಿನಯ್‌ ಕುಲಕರ್ಣಿ ಅವರ ಆಪ್ತ ಪ್ರಶಾಂತ್‌ ಕೆಕೇರೆ ಮನೆ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪ್ರಶಾಂತ್, ವಿನಯ್‌ ಕುಲಕರ್ಣಿ ಅವರಿಗೆ ಸಂಬಂಧಿಸಿದ ರಾಜಕೀಯ ವಿಚಾರಗಳನ್ನು ನೋಡಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ. ನಿನ್ನೆ ರಾತ್ರಿಯೇ ಐಟಿ ಅಧಿಕಾರಿಗಳು ಪ್ರಶಾಂತ್‌ರನ್ನ ರಹಸ್ಯ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ. ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

 

Leave a Reply

Your email address will not be published.

Social Media Auto Publish Powered By : XYZScripts.com