ಕರೆಂಟ್‌ ಬಿಲ್‌ ಜಾಸ್ತಿ ಬಂದಿದಕ್ಕೆ ಆತ್ಮಹತ್ಯೆಗೆ ಶರಣಾದ ತರಕಾರಿ ವ್ಯಾಪಾರಿ….!!

ಔರಂಗಾಬಾದ್‌ : ಮಧ್ಯಮ ವರ್ಗದವರ ಮನೆಯಲ್ಲಿ ಸಾಮಾನ್ಯವಾಗಿ ಎಷ್ಟು ಕರೆಂಟ್‌ ಬಿಲ್‌ ಬರಬಹುದು, ಹೆಚ್ಚು ಎಂದರೆ 2 ಸಾವಿರ ಅಷ್ಟೇ. ಆದರೆ ಔರಂಗಾಬಾದ್‌ನಲ್ಲಿ ತರಕಾರಿ ವ್ಯಾಪಾರ ಮಾಡುವ ವ್ಯಕ್ತಿಯೊಬ್ಬನ ಮನೆಯಲ್ಲಿ ಸುಮಾರು 8. 64 ಲಕ್ಷ ರೂ ಬಿಲ್‌ ಬಂದಿದ್ದು, ಇದರಿಂದ ಶಾಕ್ ಆತ ವ್ಯಾಪಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವಿದ್ಯುತ್‌ ವಿತರಕ ಕಂಪನಿ ಮಾಡಿರುವ ಯಡವಟ್ಟಿಗೆ ಸಾಮಾನ್ಯ ವ್ಯಕ್ತಿಯೊಬ್ಬ ಜೀವ ತೆತ್ತಿದ್ದು, ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಡೆಸಿಮಲ್‌ ಪಾಯಿಂಟ್ಸ್‌ ಮಿಸ್ ಆದ ಹಿನ್ನೆಲೆಯಲ್ಲಿ ಈ ರೀತಿ ಬಿಲ್‌ ಬಂದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಜಗನ್ನಾಥ್‌ ನೇಹಾಜಿ ಶಿಲ್ಕೆ ಎಂದು ಹೆಸರಿಸಲಾಗಿದ್ದು, ಇವರು ನಿನ್ನೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇಷ್ಟೊಂದು ಬಿಲ್ ಬಂದ ಕಾರಣ ವಿದ್ಯುತ್‌ ಪ್ರಸರಣ ಕಚೇರಿಗೆ ಅಲೆದೂ ಅಲೆದೂ ಸುಸ್ತಾಗಿದ್ದ ಜಗನ್ನಾಥ್‌, ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ.

ಏಪ್ರಿಲ್‌ ಕೊನೆಯ ವಾರದಲ್ಲಿ ಜಗನ್ನಾಥ್‌ ಅವರಿಗೆ 8.64 ರೂ ಬಿಲ್ ಬಂದಿತ್ತು. ರಶೀದಿಯಲ್ಲಿ ಅವರು ಬಳಕೆ ಮಾಡಿರುವ ವಿದ್ಯುತ್‌, 61,178 ಯುನಿಟ್‌ ಆಗಿತ್ತು. ಆದರೆ ಅವರು 6,117.8  ಯುನಿಟ್‌ ವಿದ್ಯುತ್‌ ಬಳಕೆ ಮಾಡಿದ್ದು, ಒಂದೇ ಒಂದು ಡೆಸಿಮಲ್‌ನಿಂದಾಗಿ ಈ ಯಡವಟ್ಟಾಗಿತ್ತು. ಸದ್ಯ ವ್ಯಾಪಾರಿಯ ಡೆತ್‌ನೋಟ್‌ ಎಲ್ಲೆಡೆ ವೈರಲ್ ಆಗಿದ್ದು, ನೌಕರನ ವಿರುದ್ದ ಕ್ರಮ ಕೈಗೊಳ್ಳಲಾಗಿದೆ.

One thought on “ಕರೆಂಟ್‌ ಬಿಲ್‌ ಜಾಸ್ತಿ ಬಂದಿದಕ್ಕೆ ಆತ್ಮಹತ್ಯೆಗೆ ಶರಣಾದ ತರಕಾರಿ ವ್ಯಾಪಾರಿ….!!

 • May 11, 2018 at 4:29 PM
  Permalink

  Ι hɑve been bгowsing online more than 2 hours today, yet
  I never found any ibteresting aгfticle like yours.

  It is pretty worth enough for me. In my view,
  if aⅼll webmasters and bloggers made ցood content as you did, the net will be much more usеful than ever befoгe. http://hqjzlm.com/comment/html/?95250.html

  Reply

Leave a Reply

Your email address will not be published.

Social Media Auto Publish Powered By : XYZScripts.com