ಮಹಾರಾಷ್ಟ್ರ : ಭಯೋತ್ಪಾದಕ ನಿಗ್ರಹ ದಳದ ಮಾಜಿ ಮುಖ್ಯಸ್ಥ ಹಿಮಾಂಶು ರಾಯ್ ಆತ್ಮಹತ್ಯೆ

ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳ(Anti Terror Sqaud)ದ ಮಾಜಿ ಮುಖ್ಯಸ್ಥರಾಗಿದ್ದ ಹಿಮಾಂಶು ರಾಯ್ ಅವರ ಶವ ಮುಂಬೈನ ನಿವಾಸದಲ್ಲಿ ಶುಕ್ರವಾರ ಪತ್ತೆಯಾಗಿದೆ. ಮಧ್ಯಾಹ್ನ ಮುಂಬೈನ ತಮ್ಮ ನಿವಾಸದಲ್ಲಿ ಹಿಮಾಂಶು ರಾಯ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

1988 ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದ ಹಿಮಾಂಶು ರಾಯ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಎಂದ ತಿಳಿದುಬಂದಿದೆ. ಆದರೆ ಮಾಜಿ ಅಧಿಕಾರಿಯ ಆತ್ಮಹತ್ಯೆಗೆ ಖಚಿತವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಹಲವಾರು ಹೈ ಪ್ರೊಫೈಲ್ ಪ್ರಕರಣಗಳನ್ನು ಬೇಧಿಸಿದ್ದ ಹಿಮಾಂಶು ರಾಯ್, ತಮ್ಮ ಅವಧಿಯಲ್ಲಿ ಅನೇಕ ಮಹತ್ವದ ಜವಾಬ್ದಾರಿಗಳನ್ನು ನಿಭಾಯಿಸಿದ್ದರು.

ಹಿಮಾಂಶು ರಾಯ್ 2010 ರಿಂದ 2014 ರ ಅವಧಿಯವರೆಗೆ ಕ್ರೈಮ್ ಬ್ರ್ಯಾಂಚ್ ನ ಜಂಟಿ ಆಯುಕ್ತರಾಗಿದ್ದರು. ಈ ಅವಧಿಯಲ್ಲಿ ಐಪಿಎಲ್ ಬೆಟ್ಟಿಂಗ್ ಪ್ರಕರಣದ ತನಿಖೆಯ ಮುಂದಾಳತ್ವವನ್ನು ವಹಿಸಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com