ಪರೇಶ್‌ ಮೇಸ್ತಾ ಹೆತ್ತವರಿಂದ ಬಿಜೆಪಿ ಪರ ಪ್ರಚಾರ : ಸರ್ಕಾರ ಬದಲಿಸಿ ಮಗನಿಗೆ ನ್ಯಾಯ ಕೊಡಿಸುವಂತೆ ಮನವಿ

ಉಡುಪಿ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಪರೇಶ್‌ ಮೇಸ್ತಾ ಅವರ ತಂದೆ ತಾಯಿ ಇಂದು ಬಿಜೆಪಿ ಪರ ಪ್ರಚಾರ ನಡೆಸಿದ್ದಾರೆ.

ಕೆಲ ತಿಂಗಳ ಹಿಂದೆ ನಿಗೂಢವಾಗಿ ಸಾವಿಗೀಡಾಗಿದ್ದ ಪರೇಶ್‌ ಮೇಸ್ತಾ ಪೋಷಕರು ಬಿಜೆಪಿ ಅಭ್ಯರ್ಥಿ ಸುಕುಮಾರ್‌ ಶೆಟ್ಟಿ ಪರ ಪ್ರಚಾರ ನಡೆಸಿದ್ದು, ಗೊರವನಹಳ್ಳಿ, ಮರವಂತೆಯ ಮೀನುಗಾರ ಸಮುದಾಯದ ಮನೆಗಳಿಗೆ ಭೇಟಿ ಮಾಡಿದ್ದಾರೆ.

ಕಾಂಗ್ರೆಸ್‌ ಸರ್ಕಾರ ನನ್ನ ಮಗನ ಸಾವಿಗೆ ನ್ಯಾಯ ದೊರಕಿಸಿಕೊಡಲಿಲ್ಲ. ನಮಗೆ ನ್ಯಾಯ ಒದಗಿಸದ ಸರ್ಕಾರವನ್ನು ಬದಲಿಸುವಂತೆ ಮನವಿ ಮಾಡುತ್ತಿದ್ದೇವೆ. ಆದ್ದರಿಂದ ಈ ಬಾರಿ ಬಿಜೆಪಿಗೆ ಮತ ನೀಡಿ ಎಂದು ವಿನಂತಿಸಿಕೊಂಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com