ಪ್ರಿಯ ಮೋದೀಜಿ….ನೀವು ಇಷ್ಟು ಬಾರಿ ಕರ್ನಾಟಕಕ್ಕೆ ಬರಬಾರದಿತ್ತು, ನಾಲಿಗೆ ಹರಿಬಿಡಬಾರದಿತ್ತು…!!

ನೀವು ಇಷ್ಟು ಬಾರಿ ಕರ್ನಾಟಕಕ್ಕೆ ಬರಬಾರದಿತ್ತು. ಇಷ್ಟೊಂದು ನಾಲಿಗೆಯನ್ನು ಸಡಿಲ ಬಿಡಬಾರದಿತ್ತು. ನಾಲ್ಕು ವರ್ಷಗಳ ನಿಮ್ಮ ಸತತ ವೈಫಲ್ಯಗಳ ಹೊರತಾಗಿಯೂ ನಿಮ್ಮನ್ನು ತಮ್ಮ ಆರಾಧ್ಯದೈವದಂತೆ ಪೂಜಿಸುತ್ತಿದ್ದ ಲಕ್ಷ ಗಟ್ಟಲೆ ಜನ ಇಲ್ಲಿ ಇದ್ದಾರೆ. ವಿರೋಧಿಗಳ ಪಾಲಿಸಿಗಳನ್ನು ಬಯ್ಯುತ್ತಲೇ, ಅದಿಕಾರ ಸಿಕ್ಕ ಮರುಗಳಿಗೆಯೇ ಅದೇ ಪಾಲಿಸಿಗಳನ್ನು ನಿಮ್ಮ ಅಪಕ್ವ ಗರ್ಭ ದಲ್ಲಿ ಸರೊಗಸಿ ಮಾಡಿಕೊಂಡಿದ್ದಲ್ಲದೆ ಆತುರದಲ್ಲಿ ಗರ್ಭಪಾತ ಮಾಡಿಕೊಂಡ ಗಾಂಧಾರಿಯಂತೆ ಪಾಲಿಸಿಗಳ ಪ್ರಿಮೆಚ್ಯೂರ್‌ ಡೆಲಿವರಿ ಕೂಡ ಮಾಡಿದಿರಿ. ಆದರೂ ನಿಮ್ಮ ಭಕ್ತಗಣ ನೀವು ಹೆತ್ತ ಜೀವವಿಲ್ಲದ ಭ್ರೂಣಗಳನ್ನೂ ಮುಂದೊಂದು ದಿನ ವ್ಯಾಸನ ಕರುಣೆ ಅದರಮೇಲೆ ಬೀಳಬಹುದು ಎಂಬ ಆಶಾವಾದ ದಿಂದ ಎದೆಗವಚಿಕೊಂಡಿತು. ನನ್ನಂಥವರಿಗೆ ನಿಮ್ಮ ಮೇಲೆ ಯಾವತ್ತೂ ಯಾವುದೇ ಬಗೆಯ ಹೋಪ್ಸ್ ಇರಲಿಲ್ಲ .

ಆದರೆ ನಿಮ್ಮಭಕ್ತಗಣಕ್ಕೆ ಮಾತ್ರ ನೀವೊಬ್ಬ ಅತಿಮಾನುಷ ಶಕ್ತಿಯಂತೆ ಗೋಚರಿಸುತ್ತಿದ್ದಿರಿ. ಇಡೀ ಭಾರತವನ್ನು ನೀವು ಒಂದುಗೂಡಿಸುವ ಶಕ್ತಿಯಾಗಿ ಕಾಣಿಸುತ್ತಿದ್ದಿರಿ. ಆದರೆ ಗುಜರಾತ್ ಚುನಾವಣೆಯ ಸಮಯದಲ್ಲಿ ನೀವು ನಿಮ್ಮಲ್ಲಿ ಅಡಗಿ ಕುಳಿತಿರುವ ಸಂಕುಚಿತ ವಿಚಾರಗಳು ಹಾಗು ಕೀಳು ಭಾಷೆಯ ಪರಿಚಯವನ್ನು ಜಗತ್ತಿಗೆ ತೋರಿಸಿದಿರಿ. ಈಗ ಕರ್ನಾಟಕದಲ್ಲಿ ಇನ್ನೊಂದು ಹೆಜ್ಜೆ ಮುಂದೆಹೋಗಿ ಕೀಳುಭಾಷೆಯೊಂದಿಗೆ ಅಸಭ್ಯತೆಯನ್ನೂಬೆರೆಸಿ ನಿಮ್ಮ ಭಕ್ತಾದಿಗಳಿಗೆ ಮುಜುಗರ ಉಂಟು ಮಾಡುತ್ತಿದ್ದೀರಿ. ಇಲ್ಲಿಯವರೆಗೆ ಒನಕೆ ಓಬವ್ವ , ಮದಕರಿ ನಾಯಕ , ಟಿಪ್ಪು , ರಾಯಣ್ಣ ಇವರನ್ನು ನಾವೆಲ್ಲಾ ನಮ್ಮ ನಾಡಿನ ಹಮ್ಮೆ ಎಂದು ಕೊಂಡಾಡುತ್ತಿದ್ದಿವಿ. ಯಾವತ್ತಿಗೂ ಅವರ ಜಾತಿ ಯಾವುದಿರಬಹುದು ಎಂಬ ವಿಚಾರವೇ ನಮಗೆ ಬಂದಿರಲಿಲ್ಲ.
ದಲಿತ ಮಹಿಳೆ ಓಬವ್ವ , ಒ ಬಿ ಸಿ ಕೆಟಗರಿಯ ಮದಕರಿ ನಾಯಕ , ಮಾಯ್ನಾರಿಟಿಯ ಟಿಪ್ಪು ಅಥವ ಕುರುಬ ರಾಯಣ್ಣ ಎಂಬ ಗುರುತಿಸುವಿಕೆಯೇ ಅಸಹ್ಯವೆನಿಸುತ್ತಿದೆ. ದಲಿತ ಹಾಗೂ ಒ ಬಿ ಸಿ ಇತಿಹಾಸ ಪುರುಷರನ್ನು ಕಡೆಗೆಣಿಸಿ ಮಾಯ್ನಾರಿಟಿ ರಾಜನ ಜಯಂತಿ ಮಾಡಲಾಗುತ್ತಿದೆ ಎಂದು ಹೇಳುವ ನಿಮ್ಮ ಅಲ್ಪತನ ಹಾಗೂ ಚಾರಿತ್ರಿಕ ಘಟನೆಗಳನ್ನು ವರ್ತಮಾನದ ನೆಲೆಗಟ್ಟಲ್ಲಿ ನೋಡುವ ಮತ್ತು ಆ ಮೂಲಕ ಅಸಹಿಷ್ಣುತೆಯನ್ನು ಹುಟ್ಟು ಹಾಕುತ್ತಿರುವ ನಿಮ್ಮನ್ನು ಅದ್ಹೇಗೆ ಡಿಸ್ ಓನ್ ಮಾಡಬೇಕೆಂದು ಗೊತ್ತಾಗದೆ ನಿಮ್ಮ ಭಕ್ತರು ಒದ್ದಾಡುತ್ತಿದ್ದಾರೆ. ಅದ್ಹ್ಯಾಗೆ ಮೊದಿಜಿ ಇಂಥ ಕೊಳಕು ವಿಚಾರಗಳನ್ನು ನಮ್ಮ ಮೇಲೆ ಹೇರುವ ಸಾಹಸ ಮಾಡುತ್ತೀರಿ? ಕರ್ನಾಟಕದ ಜನರನ್ನು ಏನೆಂದುಕೊಂಡಿದ್ದೀರಿ. ಸ್ವಾಮಿ ಸುಸಂಸ್ಕೃತ ನಾಡು ನಮ್ಮದು ನಿಮ್ಮ ಮಾಡೆಲ್ ನಮಗೆ ಬೇಡ. ಬೇಕಾದರೆ ಎಲೆಕ್ಶನ್ ಮುಗಿದ ಮೇಲೆ ಸ್ವಲ್ಪ ದಿನ ಇಲ್ಲಿಯೇ ಇದ್ದು ಕನ್ನಡ ಜನತೆಯ ಸಂಸ್ಕೃತಿ ಹಾಗೂ ಸಭ್ಯತೆಯನ್ನು ಕಲಿತುಕೊಂಡು ಹೋಗಿ.
ಇಂತಿ

ನಿಮ್ಮ ಭಕ್ತರ ಪರವಾಗಿ
ನಿಮ್ಮ ವೈಚಾರಿಕ ವಿರೋಧಿ

ರಾಜಲಕ್ಷ್ಮಿ ಅಂಕಲಗಿ , ವಕೀಲರು, ಅವರ ಫೇಸ್‌ಬುಕ್‌ ವಾಲ್‌ನಿಂದ

Leave a Reply

Your email address will not be published.

Social Media Auto Publish Powered By : XYZScripts.com