15ನೇ ತಾರೀಕು ನನ್ನ ಜನ್ಮದಿನ, ಕಾಂಗ್ರೆಸನ್ನು ಗೆಲ್ಲಿಸುವ ಮೂಲಕ ನನಗೆ ಉಡುಗೊರೆ ನೀಡಿ : ಡಿಕೆಶಿ

ನಾಗಮಂಗಲ : ಕಾಂಗ್ರೆಸ್‌ ಶಕ್ತಿ ಈ ದೇಶದ ಶಕ್ತಿ.  ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಈ ಬಾರಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಿ ಎಂದು ಇಂಧನ ಸಚಿವ ಡಿ.ಕೆ ಶಿವಕುಮಾರ್‌ ಮನವಿ ಮಾಡಿದ್ದಾರೆ.

ನಾಗಮಂಗಲ ಕ್ಷೇತ್ರದ ಕೊಪ್ಪ ಹೋಬಳಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ  ಡಿ.ಕೆ ಶಿವಕುಮಾರ್, ಇದೊಂದು ಐತಿಹಾಸಿಕ ಕ್ಷೇತ್ರ. ಚಲುವನಾರಾಯಣಸ್ವಾಮಿ, ಕಾಲಭೈರವೇಶ್ವರ, ಆದಿಚುಂಚನಗಿರಿ ಶ್ರೀಗಳಿರುವ ಕ್ಷೇತ್ರವಿದು. ಇಂತಹ  ನೆಲದ ಜನ ಕಾಂಗ್ರೆಸ್‌ ಗೆ ಎಂದೂ ದ್ರೋಹ ಬಗೆಯುವುದಿಲ್ಲ ಎಂದಿದ್ದಾರೆ.  ಇದೇ ವೇಳೆ  Sಎಸ್‌.ಎಂ ಕೃಷ್ಣ ಅವರನ್ನು ಸ್ಮರಿಸಿದ ಡಿಕೆಶಿ,  ನನ್ನ ಮಾಜಿ ಗುರುಗಳು ಪ್ರತಿನಿಧಿಸುತ್ತಿದ್ದ  ಕ್ಷೇತ್ರವಿದು. ಅವರ ಕುಡಿ ಇವತ್ತು ಮತ್ತೆ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದೆ ಎಂದಿದ್ದಾರೆ.
ನಾನು ಅಧಿಕಾರಕ್ಕೆ ಬಂದ ತಕ್ಷಣ ಸಾಲ ಮನ್ನಾ ಮಾಡ್ತೇನೆ ಅಂತ ಕುಮಾರಸ್ವಾಮಿ ಹೇಳುತ್ತಾರೆ.  ಹೆಚ್ಡಿಕೆ, ಹೆಚ್ಡಿಡಿಗೆ ಒಂದು ಪ್ರಶ್ನೆ ಕೇಳ್ತೀನಿ.  ಅವರು ಸ್ಪರ್ಧೆ ಮಾಡಿರೋದೆ 50-60 ಸೀಟು. ಇನ್ನೆಲ್ಲಿ ಮುಖ್ಯಮಂತ್ರಿ ಆಗಲು ಸಾಧ್ಯ. ಈ ಹಿಂದೆ ಸಿಎಂ ಆಗಿದ್ದಾಗ ಮಾಡಿದ್ದಾದ್ರೂ ಏನು?. ನಮ್ಮ ಸರ್ಕಾರದ ಯೋಜನೆಗಳು ಶಾಶ್ವತ ಯೋಜನೆಗಳು. ಬಿಜೆಪಿ ಕೂಡ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. 132 ಸೀಟು ಕಾಂಗ್ರೆಸ್ ಬಂದೆ ಬರುತ್ತೆ.  ನಾನು ಕರ್ನಾಟಕದಾದ್ಯಂತ ಸಂಚರಿಸಿದ್ದೇನೆ. ಜೆಡಿಎಸ್ ನವರು ಸ್ವಿಚ್ ಆಫ್ ಸುರೇಶ್ ಗೌಡರನ್ನ ಕರೆ ತಂದು ಟಿಕೆಟ್ ಕೊಟ್ಟಿದ್ದಾರೆ. ಜನರ ಮಧ್ಯೆ ಇಲ್ಲದೆ ಶಾಸಕನನ್ನ ಮಾಡಿ ಪ್ರಯೋಜನ ಏನು? ಹೆಚ್ಡಿಕೆ, ಹೆಚ್ಡಿಡಿ ನನ್ನನ್ನ ನೋಡಿ ಓಟ್ ಹಾಕಿ ಅಂತಾರೆ. ಅವರು ಬಂದು ಇಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತ?  ಕೊಟ್ಟ ಕುದುರೆ ಏರದವನು ಧೀರನೂ ಅಲ್ಲ. ಶೂರನೂ ಅಲ್ಲ.ಅಧಿಕಾರ ಇದ್ದಾಗ ಮಾಡದವರು.  ಅಧಿಕಾರ ಇಲ್ಲದಿದ್ದಾಗ ಹರೀತೀನಿ ಅಂತಾರೆ. ಜೆಡಿಎಸ್ ಗೆ ಮತ ಕೊಟ್ಟರೆ ಬಿಜೆಪಿಗೆ ಕೊಟ್ಟಂತೆ.ಅಲ್ಪ ಸಂಖ್ಯಾತರು ಎಚ್ಚೆತ್ತುಕೊಳ್ಳಬೇಕು ಎಂದಿದ್ದಾರೆ.

ಸ್ತ್ರೀ ಶಕ್ತಿ ಸಂಘಗಳಿಗೆ ಶಕ್ತಿ ನೀಡಿದ್ದು, ಕಾಂಗ್ರೆಸ್, ಕೃಷ್ಣ ಅವಧಿಯಲ್ಲಿನ ಸರ್ಕಾರ. ಅಳುವವರಿಗೆಲ್ಲಾ ಮರುಳಾಗಬೇಡಿ.ಇಂತಹ ನಾಟಕಕಾರರು, ಕಂಪನಿಗಳನ್ನ ಸಾಕಷ್ಟು ನೋಡಿದ್ದೀರಾ.  ಮತ್ತೆ ಅಂತಹ ಕಂಪನಿಗಳಿಗೆ ಮಂಡ್ಯದಲ್ಲಿ ಅವಕಾಶ ನೀಡಬೇಡಿ.15ನೇ ತಾರೀಖು ನನ್ನ ಹುಟ್ಟು ಹಬ್ಬ. ಹುಟ್ಟು ಹಬ್ಬದ ಹೂವಿನ ಹಾರವನ್ನು ಕಾಂಗ್ರೆಸ್‌ ಗೆಲ್ಲಿಸುವ ಮೂವಲ,  ನಾಗಮಂಗಲದಲ್ಲಿ ಚಲುವರಾಯಸ್ವಾಮಿ ಗೆಲುವಿನ ಮೂಲಕ ನೀಡಿ ಎಂದು ಮನವಿ ಮಾಡಿದ್ದಾರೆ.

Leave a Reply

Your email address will not be published.