ದಾಮದಾಸ್‌ ಪರ ವೀರಶೈವರ ಮುನಿಸು : ನಾವು ಬಿಜೆಪಿ ನಾಯಕನಿಗೆ ಮತ ಹಾಕಲ್ಲ ಎಂದ ಮುಖಂಡರು

ಮೈಸೂರು : ರಾಮದಾಸ್ ಪರ ವಿಜಯೇಂದ್ರ ಸಂಧಾನ‌ ಸಭೆ ವಿಫಲವಾಗಿದೆ. ಖಾಸಗಿ ಹೋಟೆಲ್‌ನಲ್ಲಿ ನಿನ್ನೆ ರಾತ್ರಿ ವಿಜಯೇಂದ್ರ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಈ ಸಭೆಯಲ್ಲಿ ಮಾಜಿ ಸಚಿವ ರಾಮದಾಸ್‌ ವಿರುದ್ದ ವೀರಶೈವ  ಮುಖಂಡರು ಗುಡುಗಿದ್ದಾರೆ.

ಟಿಕೆಟ್ ಘೋಷಣೆಯಾದ ಬಳಿಕ ರಾಮದಾಸ್‌ ಯಾವೊಬ್ಬ ವೀರಶೈವ ಮುಖಂಡರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ರಾಮದಾಸ್‌ ವೀರಶೈವ ಸಮುದಾಯಕ್ಕೆ ಅನ್ಯಾಯ ಎಸಗಿದ್ದಾರೆ. ಆರಂಭದಿಂದಲೂ ವಿಶ್ವಾಸಕ್ಕೆ ಪಡೆಯದೆ ಕೊನೇ ಕ್ಷಣದಲ್ಲಿ ಬೆಂಬಲ ನೀಡಲು ಸಾಧ್ಯವಿಲ್ಲ ಎಂದು ಮುಖಂಡರು  ಖಡಕ್ಕಾಗಿ ಹೇಳಿದ್ದಾರೆ.

ಹಣದಿಂದಲೇ ಚುನಾವಣೆ ಎದುರಿಸುತ್ತೇನೆ ಎನ್ನುವವರಿಗೆ ಈ ಬಾರಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದಾಗಿ ಹೇಳಿದ್ದಾರೆ. ವಿಜಯೇಂದ್ರ ಸಹ ರಾಮದಾಸ್‌ ಪರ ಮಾತನಾಡಿದ್ದು, ಬೆಂಬಲ ಸೂಚಿಸುವಂತೆ ಮನವಿ ಮಾಡಿದ್ದರು. ಆದರೆ ವೀರಶೈವ ಮುಖಂಡರು ವಿಜಯೇಂದ್ರ ಮಾತಿಗೂ ಬಗ್ಗದೆ ಹಿಂದೆ ಯಡಿಯೂರಪ್ಪ ಅವರ ರಾಜೀನಾಮೆ ಕೇಳಿದ ವ್ಯಕ್ತಿ ಪರ ಯಾಕೆ ಬೆಂಬಲ‌ ಕೇಳುವಿರಿ ಎಂದು ವಿಜಯೇಂದ್ರ ಅವರಿಗೇ ಪ್ರಶ್ನಿಸಿದ್ದಾರೆ. ವೀರಶೈವ ಮುಖಂಡರೂ ತಿರುಗಿ ಬಿದ್ದಿರುವ  ಹಿನ್ನೆಲೆಯಲ್ಲಿ ರಾಮದಾಸ್‌ ಗೆ ಪೀಕಲಾಟ ಶುರುವಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com