ಮೋದಿ ತಾನೊಬ್ನೇ ಬುದ್ದಿವಂತ ಅನ್ಕೊಂಡಿದ್ದಾರೆ. ಆದರೆ ಅವರಿಗಿಂತ ಬುದ್ದಿವಂತರು ದೇಶದಲ್ಲಿ ಬೇಕಾದಷ್ಟು ಜನ ಇದ್ದಾರೆ : ಖರ್ಗೆ

ಕಲಬುರ್ಗಿ : ಪ್ರಧಾನಿ ನರೇಂದ್ರ ಮೋದಿ ಅವರು ಸುಖಾ ಸುಮ್ಮನೆ ಬೇಕಾಬಿಟ್ಟಿಯಾಗಿ ಮಾತನಾಡುತ್ತಾರೆ. ಪ್ರಧಾನಿ ಹುದ್ದೆಗೆ ಅದರದ್ದೇ ಆದ ಗೌರವವಿದೆ. ಮೋದಿಯಿಂದಾಗಿ ಅದು ಹಾಳಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಕಲಬುರ್ಗಿಯಲ್ಲಿ ಅಭ್ಯರ್ಥಿಗಳ  ಪರ ಪ್ರಚಾರದ ವೇಳೆ ಮಾತನಾಡಿದ ಖರ್ಗೆ, ಮೋದಿ ತಾನೊಬ್ಬನೇ ಬುದ್ದಿವಂತ ಎಂದುಕೊಂಡಿದ್ದಾರೆ.  ಅವರಿಗಿಂತ ಬುದ್ದಿವಂತರು ದೇಶದಲ್ಲಿ ಬೇಕಾದಷ್ಟು ಮಂದಿ ಇದ್ದಾರೆ. ಮನಮೋಹನ್‌ ಸಿಂಗ್ ಅವರಿಂದ ಮೋದಿ ಸಾಕಷ್ಟು ವಿಷಯಗಳನ್ನು ಕಲಿಯಬೇಕಿದೆ ಎಂದಿದ್ದಾರೆ.

ಕಾಂಗ್ರೆಸ್ ದಿಲ್‌ವಾಲಾ ಪಕ್ಷವಲ್ಲ ಡೀಲ್‌ ವಾಲಾ ಪಕ್ಷ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮಲ್ಯ ನೀರವ್‌ ಮೋದಿ, ಅಂತಹವರು ಭಾರತವನ್ನು ಗುಡಿಸಿ ಗುಂಡಾಂತರ ಮಾಡಿ ಹೋಗಿದ್ದಾೆ. ಅಂತಹವರಿಗೆಲ್ಲ ಮೋದಿ ಸಹಾಯ ಮಾಡಿರುವುದಾಗಿ ಆರೋಪಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com