ಏನೇನೋ ಮಾತಾಡೊ ಬಿಜೆಪಿಯವರನ್ನು ನೋಡಿದ್ರೆ ಕಾಮಿಡಿ ಶೋ ನೋಡ್ದಂಗೆ ಆಗುತ್ತೆ : CM

ಬೆಂಗಳೂರು :  ಈ ಬಿಜೆಪಿಯವರು ಸುಖಾ ಸುಮ್ಮನೆ ಆರೋಪ ಹೊರಿಸುತ್ತಾರೆ. ಅವರ ಬಳಿ ಆಧಾರವೇ ಇರುವುದಿಲ್ಲ. ಇಂತಹವರ ಮಾತುಗಳನ್ನು ಕೇಳುತ್ತಿದ್ದರೆ ಕಾಮಿಡಿ ಶೋನಂತೆ ಭಾಸವಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಖಾಸಗಿ ಹೋಟೆಲ್‌ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿ ಸಿದ್ದರಾಮಯ್ಯ ಬಿಜೆಪಿ  ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯವರು ಒಂದು ವಿಷಯದ ಮೇಲೆ ಮಾತನಾಡುವುದಿಲ್ಲ. ವೈಯಕ್ತಿಕವಾಗಿ ದಾಳಿ ನಡೆಸುತ್ತಾರೆ. ಇವರಿಗೆ ನಾಚಿಕೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಮೋದಿ ತೀರ ಕೆಳಮಟ್ಟಕ್ಕೆ ಇಳಿಯುವುದು ಸರಿಯಲ್ಲ. ಅಭಿವೃದ್ದಿ ವಿಚಾರದಲ್ಲಿ ಮಾತನಾಡಿದರೆ ತಪ್ಪಿಲ್ಲ. ಆದರೆ ಅದನ್ನು ಬಿಟ್ಟು  ವೈಯಕ್ತಿಕವಾಗಿ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.

ಮೋದಿ, ಅಮಿತ್ ಶಾ ಜೋಡಿ ರಾಜ್ಯದಲ್ಲಿ ಯಾವುದೇ ರೀತಿಯ ಪರಿಣಾಮ ಬೀರಿಲ್ಲ. ರಾಜ್ಯದ ಜನ ಪ್ರಬುದ್ಧರಿದ್ದಾರೆ.  ನಾವು ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ.  ನಮಗೆ ಎಲ್ಲಾ ಜಾತಿ ಧರ್ಮಗಳೂ ಒಂದೇ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com