ಪೊಲೀಸ್‌ ಜೀಪ್‌-ಲಾರಿ ಮಧ್ಯೆ ಡಿಕ್ಕಿ : DYSP ಸೇರಿದಂತೆ ಮೂರು ಮಂದಿಯ ದುರ್ಮರಣ

ಬಾಗಲಕೋಟೆ :  ನಿನ್ನೆ ಮಧ್ಯರಾತ್ರಿ ಬಾಗಲಕೋಟೆ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಡಿವೈಎಸ್ಪಿ ಸೇರಿದಂತೆ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ತಾಲ್ಲೂಕಿನ ಕೂಡಲ ಸಂಗಮ ಕ್ರಾಸ್ ಬಳಿ ಲಾರಿ ಹಾಗೂ ಪೊಲೀಸ್ ಜೀಪ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೆಂಗಳೂರಿನ ಸಿಐಡಿ ಡಿವೈಎಸ್ಪಿ ಬಾಳೇಗೌಡ (55), ಸಿಐಡಿ ಪಿಎಸ್ಐ ಕೆ.ಎಚ್.ಶಿವಸ್ವಾಮಿ(55) ಹಾಗೂ ಚಾಲಕ ವೇಣು ಗೋಪಾಲ(25) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.ರಾಜ್ಯ ವಿಧಾನಸಭಾ ಚುನಾವಣೆ ನಿಮಿತ್ತ ಕರ್ತವ್ಯಕ್ಕಾಗಿ ಬೆಂಗಳೂರಿನಿಂದ ಬಾಗಲಕೋಟೆಗೆ ಬರುವಾರ ಮಾರ್ಗಮಧ್ಯೆ ಮಧ್ಯರಾತ್ರಿ 12.30ಕ್ಕೆ ಅಪಘಾತ ಸಂಭವಿಸಿದೆ.

ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಹಾಗೂ ಡಿವೈಎಸ್ಪಿ ಗಿರೀಶ್ ಸೇರಿದಂತೆ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಿವೈಎಸ್ಪಿ ಬಾಳೆಗೌಡ ಬೆಂಗಳೂರಿನ ಕೊಟ್ಟಿಗೆಪಾಳ್ಯ ನಿವಾಸಿ, ಸಿಪಿಐ ಕೆ.ಎಚ್.ಶಿವಸ್ವಾಮಿ ಚಾಮರಾಜನಗರ ಜಿಲ್ಲೆಯವರು ಎಂದು ತಿಳಿದು ಬಂದಿದೆ. ಚಾಲಕ ಸಹ ಬೆಂಗಳೂರು ಮೂಲದವರು ಎನ್ನಲಾಗಿದೆ. ತುಮಕೂರು, ಕುಣಿಗಲ್‌ನಲ್ಲಿ ನಿರೀಕ್ಷಕರಾಗಿ ಕರ್ತವ್ಯ ನಿರ್ವಸಿದ್ದ ಬಾಳೇಗೌಡ ಅವರಿಗೆ ಇತ್ತೀಚೆಗಷ್ಟೇ ಡಿವೈಎಸ್ಪಿ ಆಗಿ ಬಡ್ತಿ ನೀಡಿ ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು.

Leave a Reply

Your email address will not be published.

Social Media Auto Publish Powered By : XYZScripts.com