ಮುಖ್ಯಮಂತ್ರಿ ಆಗೋದು ನಾನೇ, ಇದು ಸೂರ್ಯ, ಚಂದ್ರರಷ್ಟೇ ಸತ್ಯ : ಮತ್ತೆ ಹಳೆಯದನ್ನೇ ಪುನರುಚ್ಛರಿಸಿದ BSY

ಬಾದಾಮಿ : ವೀರಶೈವ ಲಿಂಗಾಯತರನ್ನ ಒಡೆಯುವ ಮೂಲಕ ಶಿವಯೋಗ ಮಂದಿರದ ಸಂಸ್ಥಾಪಕ ದಿ. ಹಾನಗಲ್ ಕುಮಾರೇಶ್ವರ ಅವರಿಗೆ ಸಿಎಂ ಸಿದ್ದರಾಮಯ್ಯ ಅಪಮಾನ ಮಾಡಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಬಾದಾಮಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರನ್ನು  ಬಾದಾಮಿ ಜನ ಕ್ಷಮಿಸೋದಿಲ್ಲ. ಸಿಎಂ ಅವರನ್ನ ಸೋಲಿಸಿ ವಾಲ್ಮಿಕಿ ನಾಯಕ ಶ್ರೀ ರಾಮುಲುರನ್ನ ಗೆಲ್ಲಿಸಲಿದ್ದಾರೆಸಿಎಂ ಅವ್ರನ್ನ ಚಾಮುಂಡೇಶ್ವರಿ, ಬಾದಾಮಿ ಎರಡೂ ಕ್ಷೇತ್ರದಲ್ಲಿ ಜನ ಸೋಲಿಸ್ತಾರೆ. ಬಾದಾಮಿ, ಚಾಮುಂಡೇಶ್ವರಿಯಲ್ಲಿ ಕಾಂಗ್ರೆಸ್ ನವರೆ ಸಿಎಂ ಸಿದ್ಧರಾಮಯ್ಯ ಅವರನ್ನು ಸೋಲಿಸ್ತಾರೆ ಇದು ಸತ್ಯ ಎಂದಿದ್ದಾರೆ.

ತುಮಕೂರನಲ್ಲಿ ಕೆಪಿಸಿಸಿ ಅಧ್ಯಕ್ಷ, ಜಿ ಪರಮೇಶ್ವರನ್ನು ಸಿದ್ದರಾಮಯ್ಯ ಸೋಲಿಸಿದ್ದರು. ಅದೇ ರೀತಿ ಸಿದ್ದರಾಮಯ್ಯ ಅವರನ್ನು ಸೋಲಿಸಿ ಅವರ ಸೇಡು ತೀರಿಸಿಕೊಳ್ಳಲಿದ್ದಾರೆ. ನೂರಕ್ಕೆ ನೂರು ನನಗೆ ವಿಶ್ವಾಸ ಇದೆ, ವಾಲ್ಮಿಕಿ ಸಮಾಜದ ಹಿರಿಯ ನಾಯಕನನ್ನು ನಿಲ್ಲಿಸಿರೋದೆ ಗೆಲ್ಲಿಸೋಕೆ. ಜಿಲ್ಲೆಯಲ್ಲಿ ಏಳಕ್ಕೆ ಏಳೂ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದ್ದೇವೆ. ಇದೇ 17 ರಂದು ನಾನು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತೇನೆ. ಇದು ಸೂರ್ಯ ಚಂದ್ರರ ಇರುವುದು ಎಷ್ಟು ಸತ್ಯಾನೋ ಅಷ್ಟೇ ಸತ್ಯ. ಪುನಃ ನಾನೆ ಮುಖ್ಯಮಂತ್ರಿ ಆಗ್ತಿನಿ ಎಂದು ಉಚ್ಚರಿಸಿದ್ದಾರೆ.

ರಾಜರಾಜೇಶ್ವರಿ ನಗರದಲ್ಲಿ ನಕಲಿ ಮತದಾರರ ಐಡಿ ಪತ್ತೆ ಪ್ರಕರಣ ಸಂಬಂಧ ಮಾತನಾಡಿದ ಅವರು, ಕೇವಲ ಅಲ್ಲಿ ಅಷ್ಟೇ ಅಲ್ಲ ಬೀದರ್ ನಲ್ಲಿ, ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಕಾಂಗ್ರೆಸ್ ನವರು ಈ ರೀತಿ ಕೆಲಸ ಮಾಡಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ನಮ್ಮ ನಿರೀಕ್ಷೆಯಂತೆ ಚುನಾವಣಾ ಆಯೋಗ ಕ್ರಮ ಕೈಗೊಳ್ತಿಲ್ಲ.  ಆ ಕ್ಷೇತ್ರದಲ್ಲಿ ಚುನಾವಣೆ ಮುಂದೂಡಬೇಕುತಪ್ಪಿತಸ್ಥರ ವಿರುದ್ಧ ಕ್ರಮ‌ ಕೈಗೊಳ್ಳಬೇಕು ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com