ನಮ್ಮದು ಹಿಂದುತ್ವಕ್ಕಾಗಿ ರಾಜಕೀಯ, ಆದರೆ ಬಿಜೆಪಿಯದ್ದು ರಾಜಕೀಯಕ್ಕಾಗಿ ಹಿಂದುತ್ವ : ಮುತಾಲಿಕ್‌ ಕಿಡಿ

ಶಿರಸಿ : ನಾವು ಶಿವಸೇನೆ ಜೊತೆಗೆ ರಾಜ್ಯ ಚುನಾವಣಾ ಕಣಕ್ಕಿಳಿದಿದ್ದೇವೆ. ಹಿಂದೂ ಕೇಸರಿ ಪಡೆ ಎನ್ನುವ ಸಂಯುಕ್ತ ಪಡೆಯೊಂದಿಗೆ 100 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದ್ದೇವೆ. ನಾವು ಹಿಂದುತ್ವಕ್ಕಾಗಿ ರಾಜಕೀಯ ಮಾಡುತ್ತೇವೆ ಆದರೆ ಬಿಜೆಪಿಯವರು ರಾಜಕೀಯಕ್ಕಾಗಿ ಹಿಂದುತ್ವದ ನಾಟಕ ಮಾಡುತ್ತಾರೆ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೂ ಮೋದಿ ಸರ್ಕಾರ ರಾಮಮಂದಿರದ ಬಗ್ಗೆ ಮಾತೇ ಆಡುತ್ತಿಲ್ಲ. ದತ್ತಪೀಠದಿಂದ ಗೆದ್ದು ಬಂದು ದತ್ತಪೀಠವನ್ನೇ ಮರೆತಿದ್ದಾರೆ. ಕಾಂಗ್ರೆಸ್ ನೀತಿ ಬಾಹಿರವಾಗಿ 10 ಪಾಯಿಂಟ್ಸ್ ಮುಸ್ಲೀಂ ಪರವಾಗಿ ಹಾಕಿದೆ. ಇದರ ವಿರುದ್ಧ ನಾನು ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ದಾಖಲಿಸಿದ್ದೇನೆ ಹಿಂದುತ್ವದ ವಿರುದ್ಧ ಇರುವ MIM ನಂತ ದೇಶದ್ರೋಹಿ ಸಂಘಟನೆ ಜೊತೆ ಜೆಡಿಎಸ್ ಕೈಜೋಡಿಸಿದೆ. ಜೆಡಿಎಸ್ ಕೂಡ ದೇಶದ್ರೋಹಿ ಪಕ್ಷ. ನಾವು ಕನ್ನಡಕ್ಕೆ ದ್ರೋಹ ಬಗೆಯುವುದಿಲ್ಲ. ಮಹಾರಾಷ್ಟ್ರದ ರಾಜಕೀಯ ಹಿನ್ನೆಲೆಯಲ್ಲಿ ಶಿವಸೇನೆ ಬಗ್ಗೆ ಗೊತ್ತಿಲ್ಲ . ಆದ್ರೆ ಕರ್ನಾಟಕದಲ್ಲಿ ಮಾತ್ರ ಹಿಂದುತ್ವಕ್ಕಾಗಿ ನಾವು ಶಿವಸೇನೆ ಜೊತೆ ಕೈಜೋಡಿಸಿದ್ದೇವೆ. ಅನಂತಕುಮಾರ್ ನೂರಕ್ಕೆ ನೂರರಷ್ಟು ನಕಲಿ ಹಿಂದುವಾದಿ. ಹಿಂದೂ ಸಂಘಟನೆ ಮೂಲಕ ಬಂದ ಅನಂತಕುಮಾರ್ ಆ ಸಂಘಟನೆಗಳನ್ನ ಮುಳುಗಿಸಿದ್ದಾರೆ ಎಂದು ಆರೋಪಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com