WATCH : ಧೋನಿಯ ಮೊದಲ Crush ಹೆಸರು ಬಹಿರಂಗ : ‘ಹೆಂಡ್ತಿಗೆ ಹೇಳ್ಬೇಡಿ’ ಅಂದ ಮಾಹಿ..!

2 ವರ್ಷಗಳ ನಂತರ ಇಂಡಿಯನ್ ಪ್ರಿಮಿಯರ್ ಲೀಗ್ ಗೆ ಮರಳಿರುವ ಚೆನ್ನೈ ಸೂಪರ್ ಕಿಂಗ್ಸ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದು ಪಾಯಿಂಟ್ಸ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. 10 ಪಂದ್ಯಗಳನ್ನಾಡಿ 7 ರಲ್ಲಿ ಜಯಿಸಿರುವ ಚೆನ್ನೈ ಮತ್ತೊಮ್ಮೆ ಐಪಿಎಲ್ ಟ್ರೋಫಿಯನ್ನು ತನ್ನದಾಗಿಸಿಕೊಳ್ಳುವ ಉತ್ಸಾಹದಲ್ಲಿದೆ.

ಚೆನ್ನೈ ತಂಡದ ಪ್ರಾಯೋಜಕರಲ್ಲಿ ಒಂದಾಗಿರುವ ಗಲ್ಫ್ ಆಯಿಲ್ ಕಂಪನಿ ಇತ್ತೇಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ CSK ಆಟಗಾರರಾದ ಧೋನಿ, ರೈನಾ, ಜಡೇಜಾ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದ ಮ್ಯಾಜಿಷಿಯನ್ ಧೋನಿಗೆ ‘ ನಿಮ್ಮ ಮೊದಲ ಕ್ರಷ್ ಹೆಸರು ಹೇಳಿ..? ‘ ಎಂದು ಕೇಳಿದ್ದಾರೆ. ಧೋನಿಯ ಮೊದಲ ಕ್ರಷ್ ಹೆಸರು ‘ಸ್ವಾತಿ’ ಎಂದು ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದ ಮ್ಯಾಜಿಶಿಯನ್ ಗೆಸ್ ಮಾಡಿ ಹೇಳಿದ್ದಾರೆ.

ನಿಮ್ಮ ಊಹೆ ಸರಿಯಾಗಿದೆ ಎಂದ ಧೋನಿ ‘ 1999 ರಲ್ಲಿ ನಾನು 12ನೇ ತರಗತಿಯಲ್ಲಿ ಓದುತ್ತಿರುವಾಗ ‘ಸ್ವಾತಿ’ ಎಂಬ ಹುಡುಗಿಯ ಮೇಲೆ ಕ್ರಷ್ ಆಗಿತ್ತು ‘ ಎಂದು ಹೇಳಿದ್ದಾರೆ. ‘ ಆದರೆ ಈ ಹೆಸರನ್ನು ದಯವಿಟ್ಟು ಯಾರೂ ನನ್ನ ಹೆಂಡತಿ ಸಾಕ್ಷಿಗೆ ಮಾತ್ರ ಹೇಳಬೇಡಿ ‘ ಎಂದ ಧೋನಿ ಸಭಿಕರಲ್ಲಿ ತಮಾಷೆಯಾಗಿ ಮನವಿ ಮಾಡಿದ್ದಾರೆ.

 

 

 

Leave a Reply

Your email address will not be published.