ಮಲ್ಯ ವಿರುದ್ದ ಗೆದ್ದ ಭಾರತೀಯ ಬ್ಯಾಂಕ್‌ಗಳು : ಬ್ರಿಟನ್‌ನಲ್ಲಿರುವ ಆಸ್ತಿ ಹರಾಜಿಗೆ ಕೋರ್ಟ್‌ನಿಂದ ಗ್ರೀನ್‌ ಸಿಗ್ನಲ್‌

ಲಂಡನ್‌ : ಭಾರತದ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂಗಳನ್ನು ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್‌ ಮಲ್ಯಗೆ ಹಿನ್ನಡೆಯಾಗಿದೆ.
ಬ್ರಿಟನ್‌ನಲ್ಲಿರುವ ಮಲ್ಯ ಆಸ್ತಿಯ ನ್ನು ಭಾರತೀಯ ಬ್ಯಾಂಕ್‌ಗಳು ಹರಾಜು ಹಾಕುವುದಕ್ಕೆ ಇದ್ದ ಕಾನೂನು ತೊಡಕು ದೂರವಾಗಿದೆ. ಭಾರತೀಯ ಬ್ಯಾಂಕ್‌ಗಳು ಮಲ್ಯ ವಿರುದ್ಧ ದಾಖಲಿಸಿದ್ದ 10 ಸಾವಿರ ಕೋಟಿ ರೂ ಸಾಲ ವಂಚನೆ ಪ್ರಕರಣದ ತೀರ್ಪು ಹೊರಬಿದ್ದಿದ್ದು,  ಲಂಡನ್‌ ನ್ಯಾಯಾಲಯ ಭಾರತದ ಪರ ತೀರ್ಪು ನೀಡಿದೆ.
 
10,000 ಕೋಟಿ ರೂಪಾಯಿ ಸಾಲದ ಮೊತ್ತವನ್ನು ವಾಪಸ್ ಪಡೆಯುವುದಕ್ಕೆ ಸಂಬಂಧಿಸಿದಂತೆ ಭಾರತದ 13 ಬ್ಯಾಂಕ್‌ಗಳು ಬ್ರಿಟನ್ ಹೈಕೋರ್ಟ್‌ನಲ್ಲಿ ಅರ್ಜಿ ದಾಖಲಿಸಿದ್ದವು. ಅರ್ಜಿಯ ವಿಚಾರಣೆ ನಡೆಸಿರುವ ಬ್ರಿಟನ್ ಹೈಕೋರ್ಟ್, ಮಲ್ಯಗೆ ಸಂಬಂಧಿಸಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದನ್ನು ರದ್ದುಗೊಳಿಸುವ ಆದೇಶ ನೀಡಲು ನಿರಾಕರಿಸಿದೆ.
ಅಲ್ಲದೆ ಭಾರತೀಯ ಬ್ಯಾಂಕ್‌ಗಳು 1.145 ಬಿಲಿಯನ್ ಪೌಂಡ್‌ಗಳಷ್ಟು ಹಣವನ್ನು ವಾಪಸ್ ಪಡೆಯುವುದಕ್ಕೆ ಅರ್ಹತೆ ಹೊಂದಿವೆ ಎಂದು ಬ್ರಿಟನ್ ಹೈಕೋರ್ಟ್ ಹೇಳಿದೆ.

Leave a Reply

Your email address will not be published.