ಕಾಂಗ್ರೆಸ್‌ ದಿಲ್‌ ವಾಲಾ ಪಕ್ಷ ಅಲ್ಲ ಡೀಲ್‌ ವಾಲಾ ಪಕ್ಷ : ಕಾಂಗ್ರೆಸ್‌ ವಿರುದ್ಧ ಮೋದಿ ಗುಡುಗು

ಕೋಲಾರ : ಕಾಂಗ್ರೆಸ್ ಸದ್ಯ ಆರು ರೋಗಗಳಿಂದ ಬಳಲುತ್ತಿದೆ. ಈ ರೋಗಗಳ ವೈರಸ್ ಎಲ್ಲೆಡೆ ಹರಡಿದೆ. ಅದು ದಿಲ್ ವಾಲಾ ಪಕ್ಷವಲ್ಲ, ಡೀಲ್ ವಾಲ ಪಕ್ಷ ಎಂದು  ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಕೋಲಾರದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಕನ್ನಡದಲ್ಲಿ ಮಾತು ಪ್ರಾರಂಭಿಸಿದ ಮೋದಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಡೀ ದೇಶ ಕಾಂಗ್ರೆಸ್ ಪಕ್ಷದ ಸಂಸ್ಕೃತಿ,ಕಾಂಗ್ರೆಸ್ ನಿಯತ್ತು, ಅದರ ನೀತಿಯನ್ನು ಅಪರಾಧಗಳನ್ನು ಜನರು ಸರಿಯಾಗಿ ತಿಳಿದುಕೊಂಡಿದ್ದಾರೆ. ದೇಶದ ಎಲ್ಲಾ ಭಾಗಗಳಲ್ಲಿ ಕಾಂಗ್ರೆಸ್‌ಗೆ ಜನ ಗುಡ್‌ ಬೈ ಹೇಳಿದ್ದಾರೆ.  ಈಗ ಗುಡ್‌ ಬೈ ಹೇಳುವ ಅವಕಾಶ ಕರ್ನಾಟಕಕ್ಕೆ ಒದಗಿ ಬಂದಿರುವುದಾಗಿ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷ  ಕಾಂಗ್ರೆಸ್ ಸಂಸ್ಕೃತ,  ಕೋಮುವಾದ, ಜಾತೀಯತೆ, ಕ್ರೈಂ, ಭ್ರಷ್ಟಾಚಾರ, ಗುತ್ತಿಗೆದಾರಿಕೆ ಎಂಬ ಆರು ರೋಗಗಳಿಂದ ಬಳಲುತ್ತಿದೆ. ಕಾಂಗ್ರೆಸ್ ಪಕ್ಷ ಇಡೀ ವ್ಯವಸ್ಥೆಯನ್ನು ನಾಶ ಮಾಡುತ್ತಿುವುದಾಗಿ ಎಂದು ಕಿಡಿಕಾರಿದ್ದಾರೆ.

 ಈ ಚುನಾವಣೆ ಕರ್ನಾಟಕದಲ್ಲಿ ಯಾರು ಅಧಿಕಾರಕ್ಕೆ ಬರುತ್ತಾರೆ, ಯಾರು ಶಾಸಕರು ಆಗುತ್ತಾರೆ, ಯಾರು ಆಗಲ್ಲ, ಯಾವ ಪಕ್ಷ ಗೆಲ್ಲುತ್ತೆ, ಯಾವ ಪಕ್ಷ ಸೋಲುತ್ತೆ ಎಂಬುದಲ್ಲ. ಬದಲಿಗೆ ರಾಜ್ಯದ ಅಭಿವೃದ್ಧಿ ಮುಖ್ಯವಾಗಿದೆ. ಮುಂದಿನ ಐದು ವರ್ಷಗಳ ಕಾಲ ಯಾರು ಆಡಳಿತ ನಡೆಸುತ್ತಾರೆ ಹಾಗೂ ಯುವಕರ ಭವಿಷ್ಯವನ್ನು ನಿರ್ಧರಿಸುವ ಚುನಾವಣೆ ಇದಾಗಿದೆ ಎಂದಿದ್ದಾರೆ.

ದೇಶದಲ್ಲಿ ಹತ್ತು ವರ್ಷಗಳ ಆಡಳಿತ ನಡೆಸಿದ್ದ ಮನಮೋಹನ್ ಸಿಂಗ್ ಅವರ ರಿಮೋಟ್ ಕಂಟ್ರೋಲ್ ದೆಹಲಿ 10 ಜನ್ ಪಥ್ (ಸೋನಿಯಾಗಾಂಧಿ) ನಲ್ಲಿ ಇತ್ತು. ಆದರೆ ಕಳೆದ ನಾಲ್ಕು ವರ್ಷಗಳಿಂದ ನೀವು ನಮ್ಮ ಸರ್ಕಾರ ನೋಡಿದ್ದೀರಿ. ನಮಗಿರುವ ಹೈಕಮಾಂಡ್ ಅಂದ್ರೆ ಈ ದೇಶದ ನೂರಾ ಇಪ್ಪತ್ತೈದು ಕೋಟಿ ಜನರು, ಮೋದಿ ಎದ್ದು ನಿಲ್ಲು ಎಂದರೆ ಎದ್ದು ನಿಲ್ಲುತ್ತೇನೆ, ಬಲಕ್ಕೆ ತಿರುಗು ಎಂದರೆ ಬಲಕ್ಕೆ ತಿರುಗುತ್ತೇನೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನತಾ ಜನಾರ್ದನರೇ ನನ್ನ ಹೈಕಮಾಂಡ್ ಎಂದಿದ್ದಾರೆ.

 

ಚಿನ್ನದ ಚಮಚವನ್ನು ಬಾಯಲ್ಲಿ ಇಟ್ಟುಕೊಂಡು ಹುಟ್ಟಿದ ಜನರಿಗೆ ಬಡಜನರ ಕಷ್ಟ ತಿಳಿದಿಲ್ಲ. 60 ವರ್ಷ ಅಧಿಕಾರ ನಡೆಸಿದರೂ ಗ್ರಾಮದ ಜನರಿಗೆ ಶೌಚಾಲಯವನ್ನು ನಿರ್ಮಿಸಲು ಸಾಧ್ಯವಾಗಿಲ್ಲ. ಸರ್ಕಾರ ನಾಲ್ಕು ವರ್ಷದಲ್ಲಿ ಗ್ರಾಮದಲ್ಲಿ ಶೌಚಾಲಯದ ಕ್ರಾಂತಿ ಮಾಡಿದರೆ ಇವರು ಮೋದಿ ಶ್ರೀಮಂತರಿಗಾಗಿ ಕೆಲಸ ಮಾಡುತ್ತಾರೆ ಎಂದು ಆರೋಪ ಮಾಡುತ್ತಾರೆ.

 

Leave a Reply

Your email address will not be published.