ಉತ್ತರ ಪ್ರದೇಶದ ರಾಮ, ಕರ್ನಾಟಕದ ಹನುಮಂತ ಒಂದಾದಾಗಲೇ ರಾಮರಾಜ್ಯವಾಗೋದು : ಯೋಗಿ

ಹಾವೇರಿ‌ :  ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಇಂದು ಹಾವೇರಿಯಲ್ಲಿ ಬಿಜೆಪಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಕನ್ನಡದಲ್ಲೇ ಮಾತು ಪ್ರಾರಂಭಿಸಿದ ಯೋಗಿ,  ಬಂಧುಗಳೇ ಬಿಜೆಪಿಯ ಕಾರ್ಯಕ್ರಮಕ್ಕೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಭಾಗಿಯಾಗಿದ್ದಕ್ಕೆ ಧನ್ಯವಾದಗಳು.  ಈ ನಾಡು ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ದೃಷ್ಟಿಯಿಂದ ಶ್ರೀಮಂತಿಕೆ ಹೊಂದಿದೆ‌. ಇಲ್ಲಿನ ಕದಂಬೇಶ್ವರ ಹಾಗೂ ಧಾರ್ಮಿಕ ಮಠಗಳು ಇವೆ. ಈ ಭೂಮಿಗೆ ಬಂದೊರೋದು ನನ್ನ ಪುಣ್ಯ ಎಂದಿದ್ದಾರೆ.

ಉತ್ತರ ಪ್ರದೇಶದ ರಾಮ, ಕರ್ನಾಟಕದ ಹನುಮಂತ ಆದಾಗಲೇ ರಾಮರಾಜ್ಯವಾಗುತ್ತದೆ. ಹೀಗಾಗಿ ಉತ್ತರ ಪ್ರದೇಶದಂತೆ ರಾಜ್ಯದಲ್ಲಿ ಬಿಜೆಪಿ ಅರಳಿಸಿ ರಾಮ ರಾಜ್ಯ ಕಟ್ಟೋಣ ಎಂದಿದ್ದಾರೆ. ನಾನು ರಾಜ್ಯಕ್ಕೆ ಬಂದರೆ ಸಿದ್ದರಾಮಯ್ಯಗೆ ನಡುಕ ಶುರುವಾಗುತ್ತೆ. ಏಕೆಂದರೆ ನಾನು ರಾಷ್ಟ್ರೀಯವಾದಿ ಹೀಗಾಗಿ ಆತಂಕವಾದಿಗಳಿಗೆ ರಕ್ಷಣೆ ನಿಡಿರೋ ಇವರಿಗೆ ನಡುಕ ಉಂಟಾಗುತ್ತೆ. ಮೋದಿ ಹಾಗೂ ನಮ್ಮ ಸರಕಾರ 89 ಲಕ್ಷ ರೈತ ಕುಟುಂಬಗಳ ಸಾಲ ಮನ್ನಾ ಮಾಡಿದೆ.  ಆದರೆ ಕರ್ನಾಟಕ ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತೆ  ಈ ಸರಕಾರ ಮಾಡಿದೆ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ  ನಡೆಸಿದ್ದಾರೆ.

ಕಾಂಗ್ರೆಸ್ , ಜಿಹಾದಿಗಳು ಒಂದಾಗಿವೆ. ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರನ್ನ ಜಿಹಾದಿಗಳು ಹತ್ಯೆ ಮಾಡಿದ್ದಾರೆ. ಅವರಿಗೆ ಕಾಂಗ್ರೆಸ್ ರಕ್ಷಣೆ ನೀಡುತ್ತಿದೆ. ಈ ಭ್ರಷ್ಟಾಚಾರಿಗಳು ಹಾಗೂ ಜಿಹಾದಿಗಳನ್ನು ಕರೆದುಕೊಂಡು ಕಾಂಗ್ರೆಸ್ ಆಡಳಿತ ‌ನಡೆಸುತ್ತಿದೆ. ಹೀಗಾಗಿ ಅಭಿವೃದ್ಧಿ ಪರವಾದ ಬಿಜೆಪಿಯ ಗೆಲ್ಲಿಸಲು ಪಣ ತೊಡಬೇಕಿದೆ.ಕಾಂಗ್ರೆಸ್ ಕಿತ್ತೊಗೆದು ಯು ಬಿ ಬಣಕಾರ ಗೆಲ್ಲಿಸಬೇಕಿದೆ ಎಂದಿದ್ದಾರೆ.

Leave a Reply

Your email address will not be published.