56 ಇಂಚಿನ ಎದೆ ಮೋದಿಗೆ ಮಾತ್ರ ಅಲ್ಲ ಬಾಡಿ ಬಿಲ್ಡರ್‌ಗಳಿಗೂ ಇರುತ್ತೆ : ಸಿದ್ದರಾಮಯ್ಯ

ಮೈಸೂರು : ಆ ಮೋದಿ ಮುಧೋಳ ನಾಯಿಯಿಂದ  ನಿಯತ್ತು ಕಲಿಬೇಕು ಅಂತಾರೆ. ಅವರಿಗೇ ನಿಯತ್ತಿಲ್ಲ. ಬಿಜೆಪಿಯನ್ನು ತನ್ನನ್ನು ಬೆಳೆಸಿದ ಆಡ್ವಾಣಿಯಲ್ಲೇ ಮೂಲೆ ಗುಂಪು ಮಾಡಿರುವ ಅವರು ನಮಗೆ ಹೇಳೋಕೆ ಬರ್ತಾರೆ ಎಂದು ಮೋದಿ ವಿರುದ್ದ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿ ಬಂದ ಕೂಡಲೆ ಕಾಂಗ್ರೆಸ್ ಅಲೆ ಕಡಿಮೆಯಾಗುವುದಿಲ್ಲ. ಮೋದಿ ಕರ್ನಾಟಕಕ್ಕೆ ಏನು ಕೊಡುಗೆ ನೀಡಿದ್ದಾರೆ ಅಂತ ಬೇಕಲ್ಲ.  ಬರೀ ಮನ್‌ ಕಿ ಬಾತ್‌ ಅನ್ನೋದೇ ಆಗೋಯ್ತು. ಅದರಿಂದ ಹೊಟ್ಟೆ ತುಂಬುತ್ತಾ ಎಂದು ಪ್ರಶ್ನಿಸಿದ್ದಾರೆ.

ಅವರಿಗೆ 56 ಇಂಚಿನ ಎದೆ ಅಂತಾರೆ. ಆದರೆ ಒಳಗೆ ಬಡವರ ಪರವಾದ ಹೃದಯ, ಅವರಿಗಾಗಿ ಸ್ಪಂದಿಸುವ ಮನಸ್ಸು ಇದೆಯಾ ಎಂಬುದು ಮುಖ್ಯ. ಬಾಡಿ ಬಿಲ್ಡರ್‌ಗೂ ಇನ್ನೂ ಜಾಸ್ತಿ ಇಂಚಿನ ಎದೆ ಇರುತ್ತೆ. 56 ಇಂಚಿನ ಎದೆ ಮೋದಿಗೆ ಮಾತ್ರಾ ಇರೋದಾ ಎಂದು ವ್ಯಂಗ್ಯ ಮಾಡಿದ್ದಾರೆ.

One thought on “56 ಇಂಚಿನ ಎದೆ ಮೋದಿಗೆ ಮಾತ್ರ ಅಲ್ಲ ಬಾಡಿ ಬಿಲ್ಡರ್‌ಗಳಿಗೂ ಇರುತ್ತೆ : ಸಿದ್ದರಾಮಯ್ಯ

Leave a Reply

Your email address will not be published.