ಕಾಂಗ್ರೆಸ್‌ ಆಯ್ತು….ಈಗ ಬಿಜೆಪಿ ಸರದಿ : ಶ್ರೀರಾಮುಲು ತಂಗುತ್ತಿದ್ದ ಹೋಟೆಲ್‌ ಮೇಲೆ ಐಟಿ ದಾಳಿ !

ಚಿತ್ರದುರ್ಗ : ಬಾದಾಮಿಯಲ್ಲಿ ಸೋಮವಾರ ಕಾಂಗ್ರೆಸ್‌ಗೆ ಶಾಕ್‌ ನೀಡಿದ್ದ ಐಟಿ ಅಧಿಕಾರಿಗಳು ಈಗ ಬಿಜೆಪಿಯವರಿಗೂ ಶಾಕ್ ನೀಡಿದ್ದಾರೆ.

ಸಂಸದ ಶ್ರೀರಾಮುಲು ಬಾದಾಮಿಗೆ ಹೋದಾಗಲೆಲ್ಲ ತಂಗುತ್ತಿದ್ದ  ಕೋರ್ಟ್‌ ಹೋಟೆಲ್ ಮೇಲೆ ಅಧಿಕಾರಿಗಳು ಮಂಗಳವಾರ ತಡರಾತ್ರಿ ದಾಳಿ ಮಾಡಿದ್ದಾರೆ. ಅಲ್ಲದೆ ಹೋಟೆಲ್‌ನ ರಿಜಿಸ್ಟರ್‌ ಪುಸ್ತಕವನ್ನೂ ಪರಿಶೀಲಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ದಾಳಿಗೂ ಮುನ್ನ ಚುನಾವಣಾ ಅಕ್ರಮ ಮಾಹಿತಿ ಹಿನ್ನೆಲೆಯಲ್ಲಿ ಅಧಿಕಾರಿಗಳು ರಾಮುಲು ಆಪ್ತ ಮೊಳಕಾಲ್ಮೂರು ತಾಲೂಕು ಅಧ್ಯಕ್ಷ ಟಿ.ರೇವಣ್ಣ ಅವರ ಕೊಂಡ್ಲಹಳ್ಳಿ ತೋಟದ ಮನೆ ಹಾಗೂ ಧನಂಜಯ ರೆಡ್ಡಿ ಅವರ ದೊಡ್ಡ ಉಳ್ಳಾರ್ತಿ ಮನೆ ಮೇಲೂ ದಾಳಿ ನಡೆಸಿದ್ದರು. ಅಷ್ಟೇ ಅಲ್ಲದೇ ದಾವಣಗೆರೆಯ ಮಾಡಾಳು ಗ್ರಾಮ ಚನ್ನಗಿರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಡಾಳ್ ವಿರೂಪಾಕ್ಷಪ್ಪ ನಿವಾಸದ ಮೇಲೂ ರೇಡ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಮೊನ್ನೆಯಷ್ಟೇ ಬಾದಾಮಿಯ ಕೃಷ್ಣ ಹೆರಿಟೇಜ್ ನಲ್ಲಿ ಸಿದ್ದರಾಮಯ್ಯ ತಂಗಿದ್ದ ರೆಸಾರ್ಟ್‌ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇದಾದ ಬಳಿಕ ಈಗ ಬಿಜೆಪಿ ನಾಯಕರ ಮೇಲೂ ದಾಳಿ ನಡೆಸಿದ್ದಾರೆ.

Leave a Reply

Your email address will not be published.