ಚಿಕ್ಕೋಡಿ : ಕಮಲ ಬಿಟ್ಟು ಕೈ ತೆಕ್ಕೆಗೆ ಜಾರಿದ 40ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು
ಚಿಕ್ಕೋಡಿ : ನಿಪ್ಪಾಣಿಯಲ್ಲಿಂದು ಕಾಂಗ್ರೆಸ್ ಪ್ರಚಾರ ಸಭೆ ನಡೆಯುತ್ತಿದ್ದು ಈ ಸಭೆಯಲ್ಲಿ ಮಹಾರಾಷ್ಟ್ರ ಮಾಜಿ ಸಿಎಂ ಪೃಥ್ವಿರಾಜ್ ಚವ್ಹಾಣ್ ಭಾಗಿಯಾಗಿದ್ದಾರೆ. ನಿಪ್ಪಾಣಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಾಕಾಸಾಹೇಬ ಪಾಟೀಲ್ ಪರ ಪೃಥ್ವೀರಾಜ್ ಮತ ಯಾಚನೆ ಮಾಡಿದ್ದಾರೆ.
ಇದೇ ವೇಳೆ 40 ಮಂದಿ ಬಿಜೆಪಿ ಕಾರ್ಯಕರ್ತರು ಪಕ್ಷ ತೊರೆದು ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ. ಇದೇ ವೇಳೆ ಮಾತನಾಡಿದ ಪೃಥ್ವೀರಾಜ್. ಪ್ರಧಾನಿ ಮೋದಿ ಸರ್ಕಾರದಷ್ಟು ಭ್ರಷ್ಟ ಸರಕಾರ ಬೇರೆ ಎಲ್ಲೂ ಸಿಗೋದಿಲ್ಲ. ನೀರವ್ ಮೋದಿ, ಲಲಿತ್ ಮೋದಿ ಹಾಗೂ ವಿಜಯ್ ಮಲ್ಯ ದೇಶ ಬಿಟ್ಟು ಓಡಿ ಹೋಗಿದ್ದಾರೆ. ಉದ್ಯಮಿಗಳ ಸಾಲವನ್ನು ಜನ ಸಾಮಾನ್ಯರ ಹಣದಿಂದ ಮನ್ನಾ ಮಾಡಲಾಗುತ್ತಿದೆ. ರಾಫೆಲ್ ಯುದ್ದ ವಿಮಾನ ಹಗರಣ ದೇಶದ ಬಹು ದೊಡ್ಡ ಹಗರಣವಾಗಿದೆ. ಈ ಬಗ್ಗೆ ಮೋದಿ ಮೌನವಾಗಿದ್ದಾರೆ. ಪ್ರಧಾನಿ ಮೋದಿ ಕೇವಲ ಸುಳ್ಳು ಆಶ್ವಾಸನೆ ನೀಡುತ್ತಿದ್ದಾರೆ. ಆದರೆ ಕರ್ನಾಟಕದ ಸಿಎಂ ಸಿದ್ದರಾಮಯ್ಯ ನುಡಿದಂತೆ ನಡೆದಿದ್ದಾರೆ. ಸಿದ್ದರಾಮಯ್ಯ ಮಾಡಿರುವ ಒಳ್ಳೆಯ ಕೆಲಸಗಳಿಂದ ಮತ್ತೊಮ್ಮೆ ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬರುವುದು ಖಚಿತ ಎಂದಿದ್ದಾರೆ.