ಯಾರು ದುಡ್ಡು ಕೊಟ್ರೂ ತಗೊಳಿ, ವೋಟ್‌ ಮಾತ್ರ ನಂಗೇ ಹಾಕಿ ಎಂದ ವಾಟಾಳ್‌ ನಾಗರಾಜ್ !

ಚಾಮರಾಜನಗರ : ಚುನಾವಣಾ ಭರಾಟೆ ಜೋರಾಗುತ್ತಿದ್ದಂತೆ ಎಲ್ಲಾ ಪಕ್ಷಗಳೂ ಬೃಹತ್‌ ಮಟ್ಟದಲ್ಲಿ ಸಮಾವೇಶ ನಡೆಸುತ್ತಿವೆ. ಈ ಮಧ್ಯೆ ಚಾಮರಾಜನಗರದ ಸ್ಪರ್ಧಿ ವಾಟಾಳ್‌ ನಾಗರಾಜ್ ಸಮಾವೇಶ ನಡೆಸಿದ್ದು, ಈ ಸಮಾವೇಶದಲ್ಲಿ ಮಾನಾಡಿದ ಅವರು, ಬಿಜೆಪಿಯವರು ಮಡಿವಂತರು. ನಾನು ಮೈಲಿಗೆಯವನು. ನನ್ನ ಜಾತಿ ಅಚ್ಚ ಕನ್ನಡಿಗನ ಜಾತಿ,  ಚಾಮರಾಜನಗರ ನನ್ನ ಕರ್ಮ ಭೂಮಿ. ಶಾಸನ‌ಸಭೆ ಅದು ಮಾತಿನ ಮನೆ, ಅಲ್ಲಿಗೆ ಮಾತನಾಡುವವರು ಬೇಕು. ಡಾ.ಬಿ.ಆರ್.ಅಂಬೇಡ್ಕರ್ ಅವರು ಎಲ್ಲರಿಗೂ ದೇವರು. ಒಬ್ಬ ವಾಟಾಳ್‌ ನಾಗರಾಜ್‌ 224 ಶಾಸಕರಿಗೆ ಸಮ ಎಂದಿದ್ದಾರೆ.

ಇದೇ ವೇಳೆ ಅಮಿತ್ ಶಾ, ರಾಹುಲ್ ಗಾಂಧಿಯವರನ್ನು ಗೇಲಿ ಮಾಡಿದ ವಾಟಾಳ್‌ ನಾಗರಾಜ್‌, 10ಸಾವಿರ ನಿವೇಶನ ಕೊಡಿಸುವ ಶಕ್ತಿ ಇರೋದು ವಾಟಾಳ್ ನಾಗರಾಜ್ ಗೆ ಮಾತ್ರ. ಅದಕ್ಕಾಗಿ ಈ ಬಾರಿ ನನ್ನನ್ನು ಗೆಲ್ಲಿಸಿ ಎಂದಿದ್ದಾರೆ. ಅಲ್ಲದೆ ಯಾರಾದ್ರು ಹಣ ಕೊಟ್ರೆ ತಗೊಳ್ಳಿ, ಆದರೆ ವೋಟ್‌ ಮಾತ್ರ ನನಗೇ ಹಾಕಿ. ಮತದಾರರೇ ನನಗೆ ದೇವರುಗಳು. ಕುಡಿಯುವ ನೀರು ಕೊಟ್ಟಿರುವ ನನಗೆ ವಿಷ ಕೊಡಬೇಡಿ. ಮತದಾರರೇ ನಿಮ್ಮ ಕಾಲಿಗೆ ಬೀಳ್ತೀನಿ ದಯವಿಟ್ಟು ನನ್ನನ್ನು ಗೆಲ್ಲಿಸಿ ಎಂದು ಅಂಗಲಾಚಿದ್ದಾರೆ.

One thought on “ಯಾರು ದುಡ್ಡು ಕೊಟ್ರೂ ತಗೊಳಿ, ವೋಟ್‌ ಮಾತ್ರ ನಂಗೇ ಹಾಕಿ ಎಂದ ವಾಟಾಳ್‌ ನಾಗರಾಜ್ !

 • May 9, 2018 at 4:25 PM
  Permalink

  Thanks so much for pгoviɗing indivіduals with an extraordinarily spectacular opportunity to check tips from this website.
  It is always so аmazing plus stuffed with a gօod
  time for me personally and my office colleagᥙes to search your
  web site no less than thrice weekly to rеad tһrough the new guides you will have.
  And lastlʏ, I’m ѕo usually fulfilled considering the special advice
  served by you. Selected 4 points in this aгticle are particularly the best I
  haνe еver had.

  Reply

Leave a Reply

Your email address will not be published.