ಹಣ ಹಂಚುವಾಗ ಸುರೇಶ್ ಕುಮಾರ್ ಪುತ್ರಿಯ ಬಂಧನ..? : ಅಪ್ಪಟ ಸುಳ್ಳು ಎಂದ ಶಾಸಕ

ಮತದಾರರಿಗೆ ಅಕ್ರಮವಾಗಿ ಹಣ ಹಂಚುತ್ತಿದ್ದರು ಎಂಬ ಆರೋಪದ ಮೇಲೆ ರಾಜಾಜಿ ನಗರದ ಭಾರತೀಯ ಜನತಾ ಪಕ್ಷದ ಶಾಸಕ ಸುರೇಶ್ ಕುಮಾರ್ ಅವರ ಪುತ್ರಿ ದಿಶಾ.ಎಸ್ ಕುಮಾರ್ ಅವರನ್ನು ಬಂಧಿಸಲಾಗಿದೆ ಎಂಬ ಸುದ್ದಿ ಕೆಲವು ಮಾಧ್ಯಮಗಳಲ್ಲಿ ಹರಿದಾಡಿತ್ತು. ಹಣ ಹಂಚುತ್ತಿರುವಾಗ ಸುರೇಶ್ ಕುಮಾರ್ ಪುತ್ರಿಯ ಬಂಧನವಾಗಿದೆ ಎಂದು ವಾಟ್ಸಾಪ್ ಹಾಗೂ ಫೇಸ್ಬುಕ್ ನಂತಹ ಸೋಶಿಯಲ್ ಮೀಡಿಯಾದಲ್ಲಿಯೂ ಕಾಣಿಸಿಕೊಂಡಿದೆ.

ಈ ಪ್ರಕರಣದ ಬಗ್ಗೆ ಇದೀಗ ಬಿಜೆಪಿ ಶಾಸಕ ಸುರೇಶ್ ಕುಮಾರ್ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಸ್ಟೇಟಸ್ ಹಾಗೂ ವಿಡಿಯೋ ಪೋಸ್ಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಮತದಾರರಿಗೆ ಹಣ ಹಂಚುವಾಗ ತಮ್ಮ ಮಗಳನ್ನು ಪೋಲೀಸರು ಬಂಧಿಸಿದ್ದಾರೆ ಎಂಬುದು ಅಪ್ಪಟ ಸುಳ್ಳು ಸುದ್ದಿ, ಯಾವುದೇ ರೀತಿಯ ಹಣ ಹಂಚುವಿಕೆಯನ್ನು ನಾವು ಮಾಡಿಲ್ಲ, ಮಾಡುವುದಿಲ್ಲ ‘ ಎಂದು ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ರಾಜಾಜಿನಗರದಲ್ಲಿ ಬಿಜೆಪಿ ಅಕ್ರಮ ಹಣ ಹಂಚುತ್ತಿತ್ತು ಎಂಬ ಸುದ್ಧಿಗೆ ಙ್ನ ಸ್ಪಷ್ಟೀಕರಣ.

Posted by Suresh Kumar S on 9 मे 2018

Leave a Reply

Your email address will not be published.

Social Media Auto Publish Powered By : XYZScripts.com