SHOCKING : ರಾಜಕೀಯದ ಬಗ್ಗೆ ಇದೆಂಥಾ ನಿರ್ಧಾರಕ್ಕೆ ಬಂದ್ರು ಕಿಚ್ಚ ಸುದೀಪ್‌….!!

ಬೆಂಗಳೂರು : ನಾನು ಇನ್ನು ಮುಂದೆ ಯಾವುದೇ ಪ್ರಚಾರದಲ್ಲಿ ಭಾಗವಹಿಸುವುದಿಲ್ಲ ಎಂದು ನಟ ಕಿಚ್ಚ ಸುದೀಪ್‌ ಹೇಳಿದ್ದಾರೆ. ಈ ಕುರಿತು ಸುದೀಪ್‌ ಟ್ವೀಟ್ ಮಾಡಿದ್ದು, ಅನೇಕ ವರ್ಷದ ಪರಿಚಯದ ಕಾರಣದಿಂದಾಗಿ ಕೆಲವರ ಪರ ಪ್ರಚಾರ ನಡೆಸಿದ್ದೆ. ಇವರೆಲ್ಲಾ ಒಂದಲ್ಲಾ ಒಂದು ರೀತಿ ನನ್ನ ಜೊತೆ ಇದ್ದು, ನನ್ನ ಕಷ್ಟದ ದಿನಗಳಲ್ಲಿ ಬೆನ್ನುಲುಬಾಗಿದ್ದರು.

ಸಣ್ಣ ವಿಷಯ ಅಥವಾ ದೊಡ್ಡ ವಿಷಯ ಎಂಬುದಿಲ್ಲ. ವಿಷಯ ಯಾವುದಾದರೇನು ಸಹಕಾರ ನೀಡಿದ್ದು ಮುಖ್ಯ. ಇಂದು ಅವರಿಗಾಗಿ ನಾನು ಅಲ್ಲಿರುವುದು ನನ್ನಿಂದ ಪಡೆಯುವ ಬೆಂಬಲವಷ್ಟೇ. ನಾನು ಅವರಿಗೆ ಮಾಡಬಹುದಾದ ಕನಿಷ್ಟ ಸಹಾಯವಷ್ಟೇ. ಅದಕ್ಕೆ  ನನಗೆ ವಿಷಾದವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ನನ್ನ ಗೆಳೆಯರು ಹಾಗೂ ಅಭಿಮಾನಿಗಳ ಸಲುವಾಗಿ ನಾನು ಮುಂದಿನ ದಿನಗಳಲ್ಲಿ ಪ್ರಚಾರ ಮಾಡುವುದಿಲ್ಲ. ಎಲ್ಲರಿಗೂ ನನ್ನ ಅವಶ್ಯಕತೆ ಇದೆ ಹಾಗೂ ನಾನು ಇರುವುದರಿಂದ ಫಲಿತಾಂಶ ಬದಲಾಗುತ್ತದೆ ಎಂದು ನಾನು ಪರಿಗಣಿಸುವುದಿಲ್ಲ. ನಾನೊಬ್ಬ ಕಲಾವಿದ. ನನ್ನ ಜೊತೆಯಿರುವವರು ಹಾಗೂ ಅಭಿಮಾನಿಗಳ  ಅಭಿಪ್ರಾಯವೂ ಮುಖ್ಯವಾಗುತ್ತದೆ.  ನನ್ನ ಅಭಿಮಾನಿಗಳಿಗಾಗಿ ಈ ತೀರ್ಮಾನ ಕೈಗೊಳ್ಳುತ್ತಿದ್ದೇನೆ. ಇದು ನಾನು ತೆಗೆದುಕೊಳ್ಳುತ್ತಿರುವ ಕಠಿಣ ನಿರ್ಧಾರ,,,,ಆದರೂ,,ಈ ನಿರ್ಧಾರ ನನ್ನೊಟ್ಟಿಗೆ ನಿಂತ ನನ್ನ ಅಭಿಮಾನಿಗಳು ಹಾಗು ಗೆಳೆಯರ ಸಲುವಾಗಿ ಕೈಗೊಳ್ಳುತ್ತಿದ್ದೇನೆ…
ನಾನು ಯಾವುದೇ ರೀತಿ ನನ್ನ ಕ್ರಮಗಳಲ್ಲಿ ಅವರಿಗೆ ನೋವುಂಟು ಮಾಡಲು ಇಚ್ಛಿಸುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ ಕಿಚ್ಚ ಸುದೀಪ್‌ ತಮ್ಮ ನೆಚ್ಚಿನ ರಾಜಕಾರಣಿ ಪರ ಪ್ರಚಾರ ಕೈಗೊಂಡಿದ್ದರು. ಇದಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕಿಚ್ಚ ಚುನಾವಣಾ ಪ್ರಚಾರದಿಂದ ಹಿಂದೆ ಸರಿದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com