ನಟ ಸುದೀಪ್‌, ಯಶ್‌ ನನ್ನ ಮುಂದೆ ಬಚ್ಚಾಗಳು ಎಂದಿದ್ದ ಶಾಸಕರಿಗೆ ತಿರುಗೇಟು ನೀಡಿದ ರಾಕಿಂಗ್‌ ಸ್ಟಾರ್

ಬೆಂಗಳೂರು : ಸ್ಯಾಂಡಲ್‌ವುಡ್‌ ನಟರಾದ ಕಿಚ್ಚ ಸುದೀಪ್ ಹಾಗೂ ರಾಕಿಂಗ್‌ ಸ್ಟಾರ್‌ ಯಶ್‌ ಅವರು ನನ್ನ ಮುಂದೆ ಬಚ್ಚಾಗಳು ಎಂದಿದ್ದ ಮೊಳಕಾಲ್ಮೂರಿನ ಶಾಸಕ ತಿಪ್ಪೇಸ್ವಾಮಿ ಅವರಿಗೆ  ನಟ ಯಶ್‌ ತಿರುಗೇಟು ನೀಡಿದ್ದಾರೆ.

ಯಶ್‌,  ನೆಲಮಂಗಲ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ವಿ ನಾಗರಾಜು ಅವರ ಪರ ಯಶ್‌ ಮತಯಾಚನೆ ಮಾಡಿದ್ದಾರೆ. ಇದೇ ವೇಳೆ ಶಾಸಕ ತಿಪ್ಪೇಸ್ವಾಮಿಗೆ  ತಿರುಗೇಟು ನೀಡಿದ್ದು, ರಾಜಕೀಯ ಎನ್ನುವುದು ಒಂದು ಗೇಮ್‌ ಎಂಬುದು ನಿಜ. ತಿಪ್ಪೇಸ್ವಾಮಿ ವಯಸ್ಸೇನು ?. ಅವರು ತುಂಬಾ ಹಿರಿಯರು. ಅವರ ಮುಂದೆ ನಾನು ಬಚ್ಚಾನೆ. ಅದನ್ನು ಜನರೇ ಡಿಸೈಡ್‌ ಮಾಡುವುದಾಗಿ ಹೇಳಿದ್ದಾರೆ.

ರಾಜಕೀಯದಲ್ಲಿ ಒಬ್ಬರು ಗೆಲ್ಲಬೇಕಾದರೆ ನಾಲ್ಕು ಜನ ಸೋಲಲೇಬೇಕು.  ಶ್ರೀರಾಮುಲು ನನಗೆ ಪರಿಚಯ. ಆದ್ದರಿಂದ ಅವರ ಹಾಗೂ ನನ್ನ ಅಭಿಮಾನಿಗಳಿಗೋಸ್ಕರ ಪ್ರಚಾರ ಮಾಡಿದೆ. ಶಕ್ತಿ ಇವರುವವರು, ಬುದ್ದಿವಂತರು ಜನರ ಪ್ರೀತಿ ಗಳಿಸಲು ನಾನು ಸಹಾಯ ಮಾಡುವುದಾಗಿ ಹೇಳಿದ್ದಾರೆ.

ನಾನು ಪ್ರಚಾರ ಮಾಡುವ ಅಭ್ಯರ್ಥಿಗಳು ಹೇಗೆ ಕೆಲಸ ಮಾಡುತ್ತಾರೆ ಎಂಬುದು ಮುಖ್ಯವಲ್ಲ. ನಾನೊಬ್ಬ ಕಲಾವಿದನಾದ್ದರಿಂದ ಜನ ನನ್ನನ್ನು ಪ್ರೀತಿಸುತ್ತಾರೆ. ಅದಕ್ಕೆ ಬದಲಾಗಿ ನಾನು ಏನು ಮಾಡಬೇಕು ಎಂಬುದನ್ನು ಯೋಚಿಸುತ್ತೇನೆ.  ನಾನು ಯಾರ ದೃಷ್ಠಿಯಲ್ಲೋ ಒಳ್ಳೆಯವನಾಗಬೇಕು, ಕೆಟ್ಟವನಾಗಬೇಕು ಎಂಬುದೆಲ್ಲ ಇಲ್ಲ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com