In Pics : ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಸೋನಮ್ ಕಪೂರ್ – ಆನಂದ್ ಅಹುಜಾ

ಬಾಲಿವುಡ್ ಇಂಡಸ್ಟ್ರಿಯ ಖ್ಯಾತ ನಟ ಅನಿಲ್ ಕಪೂರ್ ಪುತ್ರಿ, ನಟಿ ಸೋನಮ್ ಕಪೂರ್ ಬಿಸಿನೆಸ್ ಮನ್ ಆನಂದ್ ಅಹುಜಾ ಅವರೊಂದಿಗೆ ಮಂಗಳವಾರ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ಸಂಬಂಧಿಕರ ಮನೆಯಲ್ಲಿ ಸಿಖ್ ಸಂಪ್ರದಾಯದಂತೆ ಸೋನಮ್-ಆನಂದ್ ವಿವಾಹ ನೆರವೇರಿತು.

Image result for sonam kapoor wedding pics

ಮದುಮಗಳು ಸೋನಮ್ ಕಪೂರ್ ಖ್ಯಾತ ಫ್ಯಾಷನ್ ಡಿಸೈನರ್ ಅನುರಾಧಾ ವಕೀಲ್ ವಿನ್ಯಾಸಗೊಳಿಸಿದ ಕೆಂಪು ಬಣ್ಣದ ಲೆಹೆಂಗಾ ಧರಿಸಿ ಕಂಗೊಳಿಸುತ್ತಿದ್ದರು. ಸೋನಮ್ ಕೈ ಹಿಡಿದ ವರ ಆನಂದ್ ಅಹುಜಾ ಬಂಗಾರ ವರ್ಣದ ಶೇರ್ವಾನಿ ಧರಿಸಿ ಮಿಂಚುತ್ತಿದ್ದರು.

Image result for sonam kapoor wedding pics

ಮದುವೆಯ ಸಮಾರಂಭದಲ್ಲಿ ಸೋನಮ್ ಪರಿವಾರದ ಸದಸ್ಯರು, ಸ್ನೇಹಿತರು ಹಾಗೂ ಬಾಲಿವುಡ್ ತಾರೆಯರಾದ ಅಮಿತಾಭ್ ಬಚ್ಚನ್, ಆಮೀರ್ ಖಾನ್, ರಾಣಿ ಮುಖರ್ಜಿ, ಕರೀನಾ ಕಪೂರ್, ಜಾಕ್ವೆಲಿನ್ ಫರ್ನಾಂಡೆಜ್, ಸ್ವರಾ ಭಾಸ್ಕರ್ ಮುಂತಾದವರು ಹಾಜರಿದ್ದರು.

Image result for sonam kapoor wedding anand ahuja

Image result for sonam kapoor wedding pics

Leave a Reply

Your email address will not be published.