ಕನ್ನಡಿಗರು ತಾಯಿಹಾಲು ಕುಡಿದಿದ್ದೇ ಆದರೆ ಯಡಿಯೂರಪ್ಪಂಗೆ ಬುದ್ದಿ ಕಲಿಸಿ……!

ವಿಜಯಪುರ : ಸಂವಿಧಾನ ಉಳಿವಿಗಾಗಿ ಕರ್ನಾಟಕ ಜಾಗೃತಿ ಸಮಾವೇಶದಲ್ಲಿ ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ದ ಕಿಡಿ ಕಾರಿದ ಜಿಗ್ನೇಶ್,  ಮೋದಿ ದೇಶದ ಚೌಕಿದಾರ್ ಅಲ್ಲಾ ಅವರೊಬ್ಬ ಚೋರ್‌ ಎಂದಿದ್ದಾರೆ. ಅಲ್ಲದೆ,  ಮೋದಿಗೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ತಕ್ಕಪಾಠ ಕಲಿಸಿ ಎಂದಿರುವ ಅವರು, ಬಿಜೆಪಿಗೆ ಯಾರೂ ಮತ ಹಾಕಬೇಡಿ. ಸಂವಿಧಾನ ಬದಲಾಯಿಸಲು ಹೊರಟವರಿಗೆ ಜೀವ ಇರೋವರೆಗೂ ಮತ ಹಾಕಬಾರದು. ಸಂಘಿಗಳಿಗೆ ಹಾಗೂ ಬಿಜೆಪಿಗೆ ಪಾಠ ಕಲಿಸಿ ಎಂದಿದ್ದಾರೆ.

ಮತದಾನ ಮಾಡದವರ ಕೈಕಾಲು ಕಟ್ಟಿ ಮತ ಹಾಕಿಸಬೇಕೆಂಬಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಕರ್ನಾಟಕ ಜನರು ತಾಯಿ ಹಾಲು ಕುಡಿದಿದ್ದರೆ ಯಡಿಯೂರಪ್ಪಗೆ ಸರಿಯಾದ ಉತ್ತರ ನೀಡಿ ಎಂದು ಕರೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com