IPL : ಸನ್ ರೈಸರ್ಸ್ ತಂಡಕ್ಕೆ 5 ರನ್ ರೋಚಕ ಜಯ : ಕೊಹ್ಲಿ ಬಳಗಕ್ಕೆ ನಿರಾಸೆ

ಹೈದರಾಬಾದ್ ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸನ್ ರೈಸರ್ಸ್ 5 ರನ್ ರೋಚಕ ಜಯ ಗಳಿಸಿದೆ.

ಟಾಸ್ ಗೆದ್ದ ಆರ್ ಸಿಬಿ  ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ 20 ಓವರುಗಳಲ್ಲಿ 146 ಮೊತ್ತ ಸೇರಿಸಿ ಆಲೌಟ್ ಆಯಿತು. ನಾಯಕ ಕೇನ್ ವಿಲಿಯಮ್ಸನ್ 56 ಹಾಗೂ ಶಾಕಿಬ್ ಅಲ್ ಹಸನ್ 35 ರನ್ ಗಳಿಸಿದರು. ಟಿಮ್ ಸೌದಿ ಹಾಗೂ ಮೊಹಮ್ಮದ್ ಸಿರಾಜ್ 3 ತಲಾ ವಿಕೆಟ್ ಪಡೆದರು.

ಗುರಿಯನ್ನು ಬೆನ್ನತ್ತಿದ ಆರ್ ಸಿಬಿ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 141 ರನ್ ಸೇರಿಸಲಷ್ಟೇ ಶಕ್ತವಾಗಿ 5 ರನ್ ಸೋಲೊಪ್ಪಿಕೊಂಡಿತು. ನಾಯಕ ವಿರಾಟ್ ಕೊಹ್ಲಿ 39, ಕಾಲಿನ್ ಡಿ ಗ್ರ್ಯಾಂಡ್ ಹಾಮ್ 33 ಹಾಗೂ ಮಂದೀಪ್ ಸಿಂಗ್ 21 ರನ್ ಗಳಿಸಿದರು.

ಟೂರ್ನಿಯಲ್ಲಿ ಆಡಿರುವ 10 ಪಂದ್ಯಗಳಲ್ಲಿ 8 ರಲ್ಲಿ ಗೆದ್ದಿರುವ ಸನ್ ರೈಸರ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಈ ಸಲ ಟ್ರೋಫಿ ಗೆಲ್ಲುವ ಆರ್ ಸಿಬಿ ಕನಸಿಗೆ ತೀವ್ರ ಹಿನ್ನಡೆಯಾಗಿದೆ.

Leave a Reply

Your email address will not be published.