Hyderabad : ಸಿರಾಜ್ ಮನೆಯಲ್ಲಿ ಬಿರಿಯಾನಿ ಸವಿದ RCB ಪ್ಲೇಯರ್ಸ್..!

ಹೈದರಾಬಾದಿನ ರಾಜೀವ್ ಗಾಂಧೀ ಮೈದಾನದಲ್ಲಿ ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರುದ್ಧ 5 ರನ್ ಸೋಲನುಭವಿಸಿತ್ತು. ಆದರೆ ಸೋಮವಾರದ ಪಂದ್ಯದಲ್ಲಿ ಸ್ಥಳೀಯ ಆಟಗಾರ, ಆರ್ ಸಿಬಿ ವೇಗಿ ಮೊಹಮ್ಮದ್ ಸಿರಾಜ್ 3 ವಿಕೆಟ್ ಪಡೆದು ಮಿಂಚಿದ್ದರು.

ಸನ್ ರೈಸರ್ಸ್ ವಿರುದ್ಧದ ಪಂದ್ಯವಾಡಲು ಹೈದರಾಬಾದ್ ಗೆ ಪ್ರಯಾಣ ಬೆಳೆಸಿದ್ದ ಆರ್ ಸಿಬಿ ಆಟಗಾರರು, ಲೋಕಲ್ ಬಾಯ್ ಮೊಹಮ್ಮದ್ ಸಿರಾಜ್ ಅವರ ಮನೆಗೆ ಭೇಟಿ ನೀಡಿದ್ದರು.

ವಿರಾಟ್ ಕೊಹ್ಲಿ, ಪಾರ್ಥಿವ್ ಪಟೇಲ್, ಯಜುವೇಂದ್ರ ಚಹಲ್ ಹಾಗೂ ಮಂದೀಪ್ ಸಿಂಗ್ ಸೇರಿದಂರೆ ಇನ್ನೂ ಕೆಲವು ಆಟಗಾರರು ಹೈದರಾಬಾದ್ ನ ಟೋಲಿ ಚೌಕ್ ನಲ್ಲಿರುವ ಮೊಹಮ್ಮದ್ ಸಿರಾಜ್ ಮನೆಗೆ ತೆರಳಿ 2 ಗಂಟೆ ಸಮಯ ಕಳೆದಿದ್ದಾರೆ. ಅಲ್ಲದೇ ಮುತ್ತಿನ ನಗರಿ ಹೈದರಾಬಾದ್ ನ ವಿಶೇಷ ಖಾದ್ಯವಾದ ‘ಹೈದರಾಬಾದಿ ಬಿರಿಯಾನಿ’ ಯನ್ನು ಸವಿದಿದ್ದಾರೆ.

Leave a Reply

Your email address will not be published.