ಪ್ರಧಾನಿ ಮೋದಿ ಎಲ್ಲರಿಗೂ ಸುಳ್ಳು ಹೇಳುತ್ತ ತಿರುಗುತ್ತಿದ್ದಾರೆ : ಗುಲಾಂ ನಬಿ ಆಜಾದ್

ಚಿಕ್ಕೋಡಿಯಲ್ಲಿ ಕೈ ಪ್ರಚಾರ ಸಭೆ ಉದ್ದೇಶಿಸಿ ಗುಲಾಂ ನಬಿ ಆಜಾದ್ ಭಾಷಣ ಮಾಡಿದ್ದಾರೆ. ‘ ನಮ್ಮ ಪ್ರಧಾನಿ ಬೇರೆ ಗ್ರಹದಿಂದ ಬಂದಿದ್ದಾರೆ, ಅವರ ಸ್ವಭಾವ, ಅವರ ಸೌಂಸ್ಕ್ರತಿ, ಬೇರೆ ಜಾತಿಯೊಡನೆ ಅವರ ಸಂಬಂಧ ಆ ರೀತಿ ಇದೆ ‘ ಎಂದಿದ್ದಾರೆ.

‘ ಪ್ರಧಾನಿ ಮೋದಿ ಪ್ರತಿಯೊಬ್ಬರಿಗೂ ಸುಳ್ಳು ಹೇಳುತ್ತ ತಿರುಗುತ್ತಿದ್ದಾರೆ, ಸುಳ್ಳು ಹೇಳಿ ಪ್ರಚಾರ ಮಾಡಿ ಓಟು ಪಡೆದಯುತ್ತಿದ್ದಾರೆ, ಅವರು ಹೇಗೆ ಅಷ್ಟು ಸುಳ್ಳು ಬಳಸುತ್ತಾರೊ ನನಗೆ ಅದರ ಬಗ್ಗೆ ಹೇಳಲು ನಾಚಿಕೆ ಆಗುತ್ತದೆ, ಪ್ರಧಾನಿಯವರೆ ನೀವು ರಾಜ್ಯದ ಮುಖ್ಯಮಂತ್ರಿಯವರ ಬಗ್ಗೆ ಸುಳ್ಳು ಆರೋಪ ಮಾಡುತ್ತಿದ್ದಿರಿ, ಇದನ್ನ ಸಾಮಾನ್ಯ ಜನ ಒಪ್ಪುವುದಿಲ್ಲ ‘

‘ ನಾನು ಖರ್ಗೆಯವರು ರೈತರ ಸಲುವಾಗಿ ಸಾಕಷ್ಟು ಬಾರಿ ಪ್ರಶ್ನೆ ಮಸಡಿದರು ನೀವು ಸುಮ್ಮನೆ ಕುಳಿತಿರಿ, ಅಲ್ಲಿ ನೀವು ಏನು ಮಾತನಾಡಲಿಲ್ಲ, 300 ದಿನ ಪ್ರಧಾನಿಯವರು ಹೊರ ದೇಶದಲ್ಲಿ ಇರುತ್ತಾರೆ, ಇನ್ನುಳಿದ ದಿನ ಮಾತ್ರ ಅವರು ಈ ದೇಶದಲ್ಲಿ ಇರುತ್ತಾರೆ. ಮೋದಿಯವರೆ ನೀವು ಬೇಟಿ ಬಚಾವೊ ಬೇಟಿ ಫಡಾವೋ ಅಂತಿದ್ದೀರಿ. ಆದರೆ ಕರ್ನಾಟಕ, ಉತ್ತರಪ್ರದೇಶ, ಜಮ್ಮುಕಾಶ್ಮೀರದಲ್ಲಿ ಪುಟ್ಟ ಬಾಲಕಿಯರ ಮೇಲೆ ಅತ್ಯಾಚಾರ ನಿರಂತರವಾಗಿ ನಡೆಯುತ್ತಿವೆ. ಇಂತಹ ಸರ್ಕಾರ ಕಿತ್ತೊಗೆಯಬೇಕು ಗಣೇಶ್ ಹುಕ್ಕೇರಿ ಮತ್ತು ಕಾಕಾಸಾಹೇಬ್ ಪಾಟೀಲ್ ಅವರಿಗೆ ಮತ ನೀಡಿ ಬೆಂಬಲಿಸಿ’ ಎಂದಿದ್ದಾರೆ.

Leave a Reply

Your email address will not be published.