ದಲಿತ ಕೇರಿಗೆ ಬಿಜೆಪಿ, RSSನವರಿಗಿಲ್ಲ ಎಂಟ್ರಿ : ಗ್ರಾಮದ ಎದುರು ರಾರಾಜಿಸ್ತಿದೆ ಬ್ಯಾನರ್‌ !

ಕಲಬುರಗಿ : ದಲಿತರ ಏರಿಯಾದಲ್ಲಿ ಆರ್ ಎಸ್ ಎಸ್, ಮತ್ತು ಬಿಜೆಪಿ ಗೆ ಮತಕೇಳಲು ಅವಕಾಶವಿಲ್ಲ ಎಂದು ಕಲಬುರಗಿ ಜಿಲ್ಲೆಯ ಬೆಳಮಗಿ ಗ್ರಾಮದ ದಲಿತರ ಏರಿಯಾದಲ್ಲಿ ಬ್ಯಾನರ್ ಹಾಕಲಾಗಿದೆ.

ಸಂವಿಧಾನ ವಿರೋಧಿಸುವ, ಬಾಬಾಸಾಹೇಬರನ್ನು ಅವಮಾನಿಸುವ, ದಲಿತರನ್ನು ನಿಂದಿಸುವ, ಮಹಿಳೆಯರನ್ನು ಅಪಮಾನಿಸುವ ಬಿಜೆಪಿ, ಆರ್ ಎಸ್ ಎಸ್ ಗೆ ಮತ ಕೇಳಲು ನಮ್ಮ ನಗರದಲ್ಲಿ ಪ್ರವೇಶವಿಲ್ಲ ಎಂಬ ಬ್ಯಾನರ್ ಅನ್ನು ದಲಿತರು ತಮ್ಮ ನಗರದ ಅಂಬೇಡ್ಕರ್ ಸಮುದಾಯ ಭವನ ಹಾಗೂ ರಸ್ತೆಗಳ ಮೇಲೆ ಕಟ್ಟಿದ್ದಾರೆ.
ಬಿಜೆಪಿ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಬಿಜೆಪಿ, ಆರ್ ಎಸ್‌ ಎಸ್ ನವರು ಸಂವಿಧಾನ ಬದಲಾವಣೆಯ ಮಾತನ್ನಾಡುತ್ತಿದ್ದಾರೆ. ಹೀಗಾಗಿ, ನಮ್ಮ ಏರಿಯಾದಲ್ಲಿ ಮತ ಕೇಳಲು ಅವರಿಗೆ ಅವಕಾಶ ಇಲ್ಲ ಎನ್ನುವ ಆಕ್ರೋಶ ವ್ಯಕ್ತವಾಗಿದೆ. ಈ ಗ್ರಾಮ ಕಲಬುರ್ಗಿ ಗ್ರಾಮೀಣ ಮೀಸಲು ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಾಜಿ ಸಚಿವರಾದ ರೇವುನಾಯಕ್ ಬೆಳಮಗಿ ಅವರ ಸ್ವಗ್ರಾಮ ಆಗಿದೆ.

Leave a Reply

Your email address will not be published.

Social Media Auto Publish Powered By : XYZScripts.com